HEALTH TIPS

ಕೇರಳ ಎನ್‌ಜಿಒ ಅಸೋಸಿಯೇಷನ್‌ನ 52ನೇ ಸಂಸ್ಥಾಪನಾ ದಿನಾಚರಣೆ

ಕಾಸರಗೋಡು: ಕೇರಳ ಎನ್‌ಜಿಒ ಅಸೋಸಿಯೇಷನ್‌ನ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಂಘಟನೆಯ 52ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. 


ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಧ್ವಜಾರೋಹಣ ನೆರವೇರಿಸಿ, ಸಂಸ್ಥಾಪನಾ ದಿನದ ಸಂದೇಶ ನೀಡಿದರು.

ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ನೌಕರರ ಹಕ್ಕುಗಳ ಪರವಾಗಿ ನಿರಂತರ ಹೋರಾಟ ನಡೆಸುತ್ತಾ, ನೌಕರರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘಟನೆ ಕಳೆದ 52 ವರ್ಷಗಳಿಂದ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಆನಪ್ಪೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಲೋಕೇಶ್ ಎನ್.ಬಿ. ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ವಿ.ಟಿ.ಪಿ. ರಾಜೇಶ್, ಕೋಶಾಧಿಕಾರಿ ವಿ.ಎಂ. ರಾಜೇಶ್ ಹಾಗೂ ಉಪಾಧ್ಯಕ್ಷ ಪ್ರವೀಣ್ ವರಯಿಲ್ಲಂ ಉಪಸ್ಥಿತರಿದ್ದರು.

ಸಂಘಟನೆಯ ಮುಖಂಡರಾದ ಜಗದೀಶನ್ ನಾಯರ್, ಜಯರಾಜ್ ಪೆರಿಯ, ಶಫೀಕ್ ತೃಕ್ಕರಿಪುರ, ನವ್‌ನೀತ್ ಕೃಷ್ಣನ್, ಗಿರಿಜಾ ಮಾಪ್ಪಿಚೇರಿ, ಸುಜಿತ್ ಮಾವುಂಗಾಲ್, ವಿ.ಕೆ. ಬಾಲಕೃಷ್ಣನ್, ಹರೀಶ್ ಕೊಡಕ್ಕಾಡ್, ಸುನೋಜ್ ಮ್ಯಾಥ್ಯೂ, ಜಿಷ್ಣು ಪೆರಿಯ ಹಾಗೂ ದೀಪಾ ಮೋಳ್ ನೇತೃತ್ವ ವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries