ಚಂಡೀಗಡ: 6 ಸಾವಿರ ಕೋಟಿ ರೂ.ಮೌಲ್ಯದ ಪಂಜಾಬ್ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಆಕ್ಟೋಬರ್ 5ರಂದು ವಿಚಾರಣೆಗೆ ಹಾಜರಾಗುವಂತೆ ಶಿರೋಮಣಿ ಅಕಾಲಿದ ದಳದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿಕ್ರಮ್ ಸಿಂಗ್ ಮಜಿಥಿಯಾ ಅವರಿಗೆ ಸಮನ್ಸ್ ನೀಡಿದೆ.
ಮಜಿಥಿಯಾ ಅವರು ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಭಾವ ಕೂಡಾ ಆಗಿದ್ದಾರೆ.
ವಜಾಗೊಳಿಸಲ್ಪಟ್ಟ ಪಂಜಾಬ್ ಪೊಲೀಸ್ ಡಿಎಸ್‌ಪಿ ಹಾಗೂ ಮಾಜಿ ಕುಸ್ತಿಪಟು ಜಗದೀಶ್ ಭೋಲಾಗೂ ಆ ದಿನವೇ ವಿಚಾರಣೆಗೆ ಹಾಜರಾಗುವಂತೆ ಸಿಟ್ ಸಮನ್ಸ್ ನೀಡಿದೆ. ಬಹುಕೋಟಿ ಡ್ರಗ್ ರ್ಯಾಕೆಟ್ ಪ್ರಕರಣದಲ್ಲಿ ಮಜಿಥಿಯಾ ಹಾಗೂ ಭೋಲಾ ಇಬ್ಬರೂ ಮೊದಲ ಬಾರಿಗೆ ಮುಖಾಮುಖಿಯಾಗಿ ಪ್ರಶ್ನಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಪೊಲೀಸರು 2013ರ ನವೆಂಬರ್‌ನಲ್ಲಿ ಭೋಲಾ ಅವರನ್ನು ಬಂಧಿಸಿತ್ತು ಹಾಗೂ ಅವರ ಮನೆಯಿಂದ 20 ಕೋಟಿ ರೂ. ಮೌಲ್ಯದ ಮಾದಕದ್ರವ್ಯವನ್ನು ವಶಪಡಿಸಿಕೊಂಡಿತ್ತು.

