HEALTH TIPS

ನಮೂನೆ 6 ಮಾರ್ಪಾಡು: ಚುನಾವಣಾ ಆಯೋಗಕ್ಕೆ ಅನುಮತಿ ನೀಡಿಲ್ಲ ಎಂದ ಸಿಜೆಐ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ, ನಮೂನೆ 6ರಲ್ಲಿ (ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲಿರುವ ನಮೂನೆ) ಯಾವುದೇ ಬದಲಾವಣೆ ಮಾಡಲು ನಾವು ಅನುಮತಿ ನೀಡಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಅವರು ಸ್ಪಷ್ಟನೆ ನೀಡಿದ್ದಾರೆ. 


ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಅವರು ಹೀಗೆ ಹೇಳಿದ್ದಾರೆ.

ಎಸ್‌ಐಆರ್‌ ವೇಳೆ, ಕೆಲವು ರಾಜ್ಯಗಳಲ್ಲಿ ನಮೂನೆ 6ರಲ್ಲಿ ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಎಂದು ಕಳೆದ ವಾರ ಚುನಾವಣಾ ಆಯೋಗ ಹೇಳಿತ್ತು. ಹೀಗಾಗಿ ಸಿಜೆಐ ಅವರ ಹೇಳಿಗೆ ಮಹತ್ವ ಪಡೆದಿದೆ.

1960ರ ಮತದರಾರ ನೋಂದಣಿ ಕಾನೂನಿಗೆ ತಿದ್ದುಪಡಿ ತರದೆ ನಮೂನೆ 6ರಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ಇಬ್ಬರು ಚುನಾವಣಾ ಆಯುಕ್ತರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ನಮೂನೆ 6ರಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ಆಂಗ್ಲ ದೈನಿಕವೊಂದು ಪ್ರಕಟಿಸಿದ ತನಿಖಾ ವರದಿಯಲ್ಲಿ ಹೇಳಿತ್ತು.

ಈ ಬಗ್ಗೆ ಸಪ್ಟೆಂಬರ್ 26ರಂದು ಬಿಡುಗಡೆ ಮಾಡಿದ್ದ ಚುನಾವಣಾ ಆಯೋಗ, 2026ರ ಮೇ ತಿಂಗಳಿನಲ್ಲಿ ನೀಡಿದ ತೀರ್ಪಿನಲ್ಲಿ, ನಮೂನೆ 6ರ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳಿತ್ತು.

ಇಂದು ಸಿಜೆಐ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, 'ನಮೂನೆ 6ರಲ್ಲಿ ಯಾವುದೇ ಬದಲಾವಣೆ ಮಾಡಬೇಕಿದ್ದರೂ ನಮ್ಮ ಅನುಮತಿ ಬೇಕು. ದಾಖಲೆಗಳನ್ನು ಸಲ್ಲಿಸಿದರೆ, ಬದಲಾವಣೆ ಮಾಡಿವದರು ಯಾರು ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ' ಎಂದಿದ್ದಾರೆ.

ನಮೂನೆ 6ರಲ್ಲಿ ಮಾಡಲಾದ ಹೊಸ ಬದಲಾವಣೆ ಪ್ರಕಾರ, ವ್ಯಕ್ತಿಯೊಬ್ಬ ಹೊಸದಾಗಿ ಮತದಾರರನಾಗಿ ನೋಂದಾಯಿಸಿಕೊಳ್ಳಬೇಕಾದರೆ, ಹಿಂದಿನ ಎಸ್‌ಐಆರ್‌ನಲ್ಲಿದ್ದ ಅವರ ಪೋಷಕರೊಂದಿಗೆ ಮ್ಯಾಪ್ ಮಾಡಬೇಕು.

ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎನ್ನಲಾದ 14 ನಿರ್ಧಾರಗಳನ್ನು ರದ್ದು ಮಾಡಬೇಕು ಎಂದು ಕೋರಿ ವಕೀಲ ಶೈಲೇಂದ್ರ ಮಾಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಹೀಗೆ ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries