ಬದಿಯಡ್ಕ: ಬ್ರಾಹ್ಮಣ ಪರಿಷತ್ ಕಾಸರಗೋಡು ಘಟಕದ ವಾರ್ಷಿಕ ಮಹಾಸಭೆ ನವೆಂಬರ್ 8 ರ ಭಾನುವಾರ ಎಡನೀರು ಮಠದಲ್ಲಿ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಪರಮಪೂಜ್ಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
2001 ರಲ್ಲಿ ಕಾಸರಗೋಡು ಜಿಲ್ಲೆಯ ಹವ್ಯಕ, ಶಿವಳ್ಳಿ, ಕರಾಡ, ಯೋಗಕ್ಷೇಮ, ಕೂಟ ಮಹಾಜಗತ್ತು, ಶಿವ (ಸ್ಥಾನಿಕ) ಬ್ರಾಹ್ಮಣ ಹಾಗೂ ಕೇರಳ ಬ್ರಾಹ್ಮಣ (ಅಯ್ಯರ್ ಸಭಾ) ಸೇರಿದಂತೆ ಸುಮಾರು ಏಳು ಬ್ರಾಹ್ಮಣ ಸಂಘಟನೆಗಳ ಸದಸ್ಯರನ್ನು ಒಗ್ಗೂಡಿಸಿ ಬ್ರಾಹ್ಮಣ ಪರಿಷತ್ ಸ್ಥಾಪಿಸಲಾಯಿತು.
ನವೆಂಬರ್ 8ರಂದು ಬೆಳಿಗ್ಗೆ 9 ಗಂಟೆಗೆ ನೋಂದಣಿ ಹಾಗೂ ಭಜನೆ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಜೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪಪ್ರಜ್ವಲನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ.
ಬ್ರಾಹ್ಮಣ ಪರಿಷತ್ ಅಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರೊ. ಎಂ. ಶಿವರಾಮ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಚೇತನಾ ಸಿ.ಎಸ್. ಅವರಿಗೆ ಡಾ. ಯು.ಬಿ. ಕುಣಿಕುಳ್ಳಾಯ ಸ್ಮಾರಕ ಪ್ರಶಸ್ತಿ, ಕೃಷಿ ಪ್ರಶಸ್ತಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಡಾ. ಶಿವಶಂಕರ ಮಂಗಳೂರು, ಡಾ. ಕಾಟಿಪಳ್ಳ ಸುಬ್ರಹ್ಮಣ್ಯ ಭಟ್ ಬೆಂಗಳೂರು, ಡಾ. ಕೃಷ್ಣ ಕುಮಾರಿ ಕಾಂತಂಗಾಡು ಹಾಗೂ ಡಾ. ಸತ್ಯನಾಥ ಕಳನಾಡು ಅವರು ಶುಭಾಶಂಸನೆ ಮಾಡಲಿದ್ದಾರೆ.
ಲೆಕ್ಕಪರಿಶೋಧಕ ಎಚ್.ಎಸ್. ಭಟ್ ಕಾಂತಂಗಾಡು ಅವರು ಸಮನ್ವಯ ಎಜುಕೇಶನಲ್ ???ಂಡ್ ಚಾರಿಟೇಬಲ್ ಟ್ರಸ್ಟ್ ಕುರಿತು ಮಾಹಿತಿ ನೀಡಲಿದ್ದಾರೆ.ಬ್ರಾಹ್ಮಣ ಪರಿಷತ್ ಪ್ರಧಾನ ಕಾರ್ಯದರ್ಶಿ ಆರ್. ಸೂರ್ಯನಾರಾಯಣ ಭಟ್, ಆದ್ಯ ಗುರುಪ್ರಸಾದ್, ಕೋಶಾಧಿಕಾರಿ ಟಿ. ಗೋವಿಂದನ್ ನಂಬೂದಿರಿ, ರಾಜೇಂದ್ರ ಬಜಕೂಡ್ಲು, ಪೆÇ್ರ. ಜೀನಾಥ ಉಪಾಧ್ಯಾಯ, ಸತೀಶ್ ಪುಣಿಂಚತ್ತಾಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ಭೋಜನದ ಬಳಿಕ ಸಂಜೆ 4 ಗಂಟೆಯವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

.jpg)
.jpg)
