HEALTH TIPS

ದಿಲ್ಲಿ | ACP ವಿವೇಕ್ ಭಗತ್‌ರದ್ದು ಎನ್ನಲಾದ ವಿಡಿಯೋ ಪ್ರಸಾರ: ಪತ್ರಕರ್ತನ ಬಂಧನ

ನವದೆಹಲಿ: ಇತ್ತೀಚಿನ ಪ್ರತಿಭಟನೆಯ ಸಂದರ್ಭದಲ್ಲಿ, ದಿಲ್ಲಿ ಪೊಲೀಸ್‌ನ ಎಸಿಪಿ ವಿವೇಕ್ ಭಗತ್ ಮಹಿಳೆಯೊಬ್ಬರೊಂದಿಗೆ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ''ತಪ್ಪಾಗಿ ಬಿಂಬಿಸುವ ನಕಲಿ ವೀಡಿಯೊ''ವೊಂದನ್ನು ಹಂಚಿಕೊಂಡ ಆರೋಪದಲ್ಲಿ ದಿಲ್ಲಿ ಪೊಲೀಸ್‌ನ ಸೈಬರ್ ಘಟಕವು 24 ವರ್ಷದ ಸ್ವತಂತ್ರ ಪತ್ರಕರ್ತರೊಬ್ಬರನ್ನು ಬಂಧಿಸಿದೆ. 


ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ವೀಡಿಯೋವನ್ನು ತಿರುಚಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಎಂಬಂತೆ ಸುಳ್ಳಾಗಿ ತೋರಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆ ದೃಶ್ಯಗಳ ಜೊತೆಗೆ ವಿವೇಕ್ ಭಗತ್‌ರ ಚಿತ್ರ, ಹೆಸರು ಮತ್ತು ಹುದ್ದೆಯನ್ನು ಪ್ರದರ್ಶಿಸಲಾಗಿದ್ದು, ವಿಡಿಯೋದಲ್ಲಿರುವ ಪೊಲೀಸ್ ಅಧಿಕಾರಿಯೇ ಅವರು ಎಂಬ ತಪ್ಪು ಭಾವನೆ ಮೂಡುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಮಹಿಳಾ ಪತ್ರಕರ್ತೆಯೊಬ್ಬರು ಭಗತ್ ವಿರುದ್ಧ ಅನುಚಿತ ವರ್ತನೆಯ ಆರೋಪ ಹೊರಿಸಿ ನೀಡಿರುವ ದೂರಿಗೂ, ಈ ಸೈಬರ್ ಪೊಲೀಸ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆ ಮಹಿಳಾ ಪತ್ರಕರ್ತೆಯ ದೂರಿನ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ.

ಆರೋಪಿ ನದೀಮ್ ಅಹ್ಮದ್ ಅಮೀನ್‌ರನ್ನು ಸೋಮವಾರ ಹರ್ಯಾಣದ ಮೇವಾತ್ ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆ. ವೀಡಿಯೋ ಹಂಚಿಕೊಳ್ಳಲು ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್‌ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಸ್ವತಂತ್ರ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದು, 'ನ್ಯೂಸ್ ಐನಾ ಟುಡೇ' ಎಂಬ ಇನ್‌ಸ್ಟಾಗ್ರಾಮ್ ಸುದ್ದಿ ಪುಟವನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries