HEALTH TIPS

Asian Games | ಪುರುಷರ ವೈಯಕ್ತಿಕ ಕಾಂಪೌಂಡ್ ಆರ್ಚರಿ: ಗಣೇಶ್ ತಿರುಮುರುಗೆ ಕಂಚು

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಪುರುಷರ ಬಿಲ್ಲುಗಾರಿಕೆ ಸ್ಪರ್ಧೆಯ ಕಾಂಪೌಂಡ್ ವಿಭಾಗದಲ್ಲಿ ಭಾರತದ ಗಣೇಶ್ ಮಣಿರತ್ನಂ ತಿರುಮುರು ಕಂಚಿನ ಪದಕ ಗೆದ್ದಿದ್ದಾರೆ.


20 ವರ್ಷದ ತಿರುಮುರು ವಿಯೆಟ್ನಾಂನ ಕಾಂಗ್ ಡಕ್ ಡಾಂಗ್ ಅವರನ್ನು ನಾಲ್ಕು ಎಂಡ್‌ಗಳಲ್ಲಿ 149-144 ಅಂಕಗಳಿಂದ ಸೋಲಿಸಿದರು. 

ಇದರೊಂದಿಗೆ, ಹಾಲಿ ಕ್ರೀಡಾಕೂಟದ ಬಿಲ್ಲುಗಾರಿಕೆ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಪದಕವನ್ನು ತಂದುಕೊಟ್ಟರು.

ಬುಧವಾರದಂದು ಚಿನ್ನ ಗೆದ್ದ ಭಾರತೀಯ ಪುರುಷರ ತಂಡದ ಭಾಗವಾಗಿದ್ದ ಗಣೇಶ್‌ಗೆ, ಇದು ಈ ಬಾರಿಯ ಕ್ರೀಡಾಕೂಟದಲ್ಲಿ ಎರಡನೇ ಪದಕವಾಗಿದೆ.

ಗಣೇಶ್ ಇಡೀ ಪಂದ್ಯದಲ್ಲಿ ಕೇವಲ ಒಮ್ಮೆ ಮಾತ್ರ 10-ರಿಂಗ್ ಗುರಿಯನ್ನು ತಪ್ಪಿಸಿಕೊಂಡರು ಹಾಗೂ ಭಾರತೀಯ ಓಜಸ್ ದಿಯೋಟಾಲೆ ಅವರ ಹೆಸರಿನಲ್ಲಿರುವ ಏಶ್ಯನ್ ದಾಖಲೆಯನ್ನು ಸರಿಗಟ್ಟುವ ಅವಕಾಶದಿಂದ ಕೂದಲೆಳೆಯ ಅಂತರದಲ್ಲಿ ವಂಚಿತರಾದರು.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ನಾಯ್ಡುಪೇಟೆ ಪಟ್ಟಣದಲ್ಲಿ ಜನಿಸಿದ ಗಣೇಶ್, ಐರ್‌ಲ್ಯಾಂಡ್‌ನಲ್ಲಿ ನಡೆದ 2023ರ ವಿಶ್ವ ಯೂತ್ ಚಾಂಪಿಯನ್‌ಶಿಪ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪುರುಷರ ಅಂಡರ್-18 ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

2024ರಲ್ಲಿ ಅವರು ಜೂನಿಯರ್ ಏಶ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಲ್ಲದೆ, ಮೊದಲ ಬಾರಿಗೆ ಹಿರಿಯರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಒಂದು ವರ್ಷದ ನಂತರ, ಕೆನಡಾದಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries