HEALTH TIPS

ಅರಾಜಕತೆ ಸೃಷ್ಟಿಸಲು, ರಾಹುಲ್ ಗಾಂಧಿಯನ್ನು ಮುಂಚೂಣಿಗೆ ತರಲು 'ಇಂಡಿಯಾ' ಯತ್ನ: BJP

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ' ಮೈತ್ರಿಕೂಟದ ಸಂಸದರು ನಡೆಸಿದ ಮೆರವಣಿಗೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. 


'ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಅರಾಜಕತೆ ಸೃಷ್ಟಿಸಲು ಹಾಗೂ ರಾಹುಲ್ ಗಾಂಧಿ ಅವರನ್ನು ಮತ್ತೆ ಮುಂಚೂಣಿಗೆ ತರಲು ನಡೆಸಿದ ಮತ್ತೊಂದು ಪ್ರಯತ್ನ ಇದು' ಎಂದು ಆರೋಪಿಸಿದೆ. 

'ಇಂಡಿಯಾ' ಮೈತ್ರಿಕೂಟದ ನಡೆಯನ್ನು ಖಂಡಿಸಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 'ಸಾಂವಿಧಾನಿಕ ಸಂಸ್ಥೆಗಳ ವರ್ಚಸ್ಸನ್ನು ಕುಗ್ಗಿಸುವ ಉದ್ದೇಶದಿಂದ ಅವುಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ, ಚುನಾವಣೆಯಲ್ಲಿ ತಮಗೆ ಎದುರಾದ ಸೋಲಿನ ಹತಾಶೆಯನ್ನು ಈ ಮೆರವಣಿಗೆಯ ಮೂಲಕ ಹೊರಹಾಕಲಾಗುತ್ತಿದೆ' ಎಂದು ಹೇಳಿದರು.

'ವಿರೋಧ ಪಕ್ಷದ ಮಿತ್ರರೇ... ನೀವು ಈಗ ಯಾವ ವ್ಯವಸ್ಥೆಯನ್ನು ಪ್ರಶ್ನಿಸುತ್ತಿರುವಿರೋ ಅದೇ ವ್ಯವಸ್ಥೆಯ ಅಡಿಯಲ್ಲಿ ನೀವು ಕೇರಳ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಗೆದ್ದಿದ್ದೀರಿ. ಆ ಎಲ್ಲ ಗೆಲುವುಗಳು ಅಕ್ರಮವಾಗಿದ್ದವೇ' ಎಂದು ಬಿಜೆಪಿಯ ಹಿರಿಯ ನಾಯಕ ಪ್ರಶ್ನಿಸಿದರು.

ಸೋಲು ಒಪ್ಪಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವವಾಗಿದೆ ಎಂದು ಪ್ರತಿಪಾದಿಸಿದ ಅವರು, ಪ್ರಜಾಪ್ರಭುತ್ವವನ್ನು ಅವಮಾನಿಸುವುದನ್ನು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ವರ್ಚಸ್ಸಿಗೆ ಧಕ್ಕೆ ತರುವುದನ್ನು ನಿಲ್ಲಿಸುವಂತೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಕರೆ ನೀಡಿದರು.

'ನೀವು ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸಿದರೆ, ದೇಶವನ್ನು ಅರಾಜಕತೆಯ ಬೆಂಕಿಗೆ ತಳ್ಳುವ ಪಾಪ ಮಾಡಿದಂತಾಗುತ್ತದೆ. ಅಂತಹ ಕೆಲಸ ಮಾಡಿದರೆ ಈ ದೇಶದ ಜನ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ' ಎಂದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries