HEALTH TIPS

ಕನ್ನೆಪ್ಪಾಡಿ ಆಶ್ರಮಕ್ಕೆ ಕಂಪ್ಯೂಟರ್, ಪ್ರಿಂಟರ್ ಕೊಡುಗೆ

ಬದಿಯಡ್ಕ: ಕನ್ನೆಪ್ಪಾಡಿ ಆಶ್ರಮದ ಸಂಸ್ಥಾಪಕಿ ದಿವಂಗತ ಶಾರದಮ್ಮ ಅವರ 9ನೇ ಪುಣ್ಯತಿಥಿಯ ಅಂಗವಾಗಿ ಉದ್ಯಮಿ ಶಿವಶಂಕರ್ ನೆಕ್ರಾಜೆ ಅವರು ಆಶ್ರಮಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳನ್ನು ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಿವಶಂಕರ್ ಅವರು, ಆಶ್ರಮದ ಸೇವಾ ಕಾರ್ಯಗಳನ್ನು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ದೊರೆತಿರುವುದು ತಮಗೆ ಸಂತೋಷ ತಂದಿದೆ ಎಂದರು.

ಆಶ್ರಮವೆಂದರೆ ಕೇವಲ ಒಂದು ಸಂಸ್ಥೆಯಲ್ಲ. ಅದು ಪ್ರೀತಿ, ಕಾಳಜಿ, ಮಾನವೀಯತೆ ಮತ್ತು ಸೇವಾ ಮನೋಭಾವದ ಪ್ರತೀಕವಾಗಿದೆ. ಸಮಾಜದಲ್ಲಿ ಪ್ರೀತಿ ಮತ್ತು ಆಸರೆಯ ಅಗತ್ಯವಿರುವವರಿಗೆ ಆಶ್ರಯ ನೀಡಿ, ಅವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸುವ ಇಂತಹ ಸಂಸ್ಥೆಗಳ ಸೇವೆ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.

ಆಶ್ರಮಕ್ಕೆ ನೀಡಿರುವ ಕಂಪ್ಯೂಟರ್ ಮತ್ತು ಪ್ರಿಂಟರ್‍ಗಳು ದೈನಂದಿನ ಕಾರ್ಯಚಟುವಟಿಕೆಗಳು, ದಾಖಲೆಗಳ ನಿರ್ವಹಣೆ ಹಾಗೂ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕೆಲಸಗಳಿಗೆ ನೆರವಾಗಲಿವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಮಾಜಕ್ಕೆ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಸಹಾಯ ಮಾಡಲು ದೊಡ್ಡವರಾಗಿರಬೇಕಾಗಿಲ್ಲ ಅಥವಾ ದೊಡ್ಡ ಮೊತ್ತದ ಹಣ ಹೊಂದಿರಬೇಕಾಗಿಲ್ಲ. ನಮ್ಮಿಂದ ಸಾಧ್ಯವಾಗುವ ಸಣ್ಣ ಸಹಾಯವೂ ಮತ್ತೊಬ್ಬರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂದು ಶಿವಶಂಕರ್ ಅಭಿಪ್ರಾಯಪಟ್ಟರು.

ಆಶ್ರಮದ ಸೇವಾ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉತ್ತಮವಾಗಿ ಮುಂದುವರಿಯಲಿ ಹಾಗೂ ಈ ಸಂಸ್ಥೆಯ ಮೂಲಕ ಅನೇಕ ಜನರ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಭರವಸೆ ಮೂಡಲಿ ಎಂದು ಹಾರೈಸಿದರು. ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಶ್ರಮದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸಹಕರಿಸುತ್ತಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಆಶ್ರಮದ ಹಿತೈಷಿ ಅಗಲೇಶ್ ನಗುಮುಂಗಂ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಮಾಸ್ಟರ್ ಪಂಜಿತೊಟ್ಟಿ, ನಿವೃತ್ತ ತಹಶೀಲ್ದಾರ್ ನಾರಾಯಣ ಗೋಸಾಡ, ತಾರಾನಾಥ ರೈ ಕಾಡಾರುಬೀಡು, ಕೆ.ಎಸ್. ಮೋಹನ್ ಹಾಗೂ ಮೋಹನ್ ಕುಂಬಳೆ ಉಪಸ್ಥಿತರಿದ್ದರು.

ಆಶ್ರಮದ ಪ್ರಧಾನ ಕಾರ್ಯದರ್ಶಿ ರಮೇಶ್ ಕಳೇರಿ ಅವರು ಶಿವಶಂಕರ್ ಅವರನ್ನು ಗೌರವಿಸಿದರು. ಆಶ್ರಮದ ಹಿರಿಯರಾದ ಸುದಮ್ಮ ಅವರು ಸ್ವತಃ ತಯಾರಿಸಿದ ಶುಭಾಶಯ ಪತ್ರವನ್ನು ನೀಡಿದರು. ಭಾರತೀ ವಂದಿಸಿದರು. ಈ ಸಂದರ್ಭದಲ್ಲಿ ಗೋವುಗಳಿಗೆ ಗೋಗ್ರಾಸ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries