HEALTH TIPS

ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ಸಮಾರೋಪ: ತಂತ್ರಿ ಅನಂತಪದ್ಮನಾಭ ಉಪಾಧ್ಯಾಯರ ಜನ್ಮಶತಮಾನೋತ್ಸವ ಮನವಿ ಪತ್ರ ಬಿಡುಗಡೆ


ಬದಿಯಡ್ಕ
: ಕೊಲ್ಲಂಗಾನ ಶ್ರೀ ನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ಜರುಗಿದ ನವರಾತ್ರಿ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘದ (ರಿ.) 38ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭವು ಬುಧವಾರ ಸಂಜೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೊಲ್ಲಂಗಾನದ ಶ್ರೀಚಕ್ರ ಆರಾಧಕರಾದ ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಅವರು 'ತಂತ್ರ ವಿದ್ಯಾ ತಿಲಕ ಬ್ರಹ್ಮಶ್ರೀ ಅನಂತಪದ್ಮನಾಭ ಉಪಾಧ್ಯಾಯರ ಜನ್ಮ ಶತಮಾನೋತ್ಸವ ಮನವಿ ಪತ್ರ'ವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನವರಾತ್ರಿಯು ಕೇವಲ ಬಾಹ್ಯ ಪೂಜೆ-ಉತ್ಸವಗಳಿಗಷ್ಟೇ ಸೀಮಿತವಾಗಿರದೆ, ಅಂತರಂಗದ ಅಸುರೀ ಶಕ್ತಿಗಳನ್ನು ನಿಗ್ರಹಿಸಿ ದೈವೀ ಚೈತನ್ಯವನ್ನು ಜಾಗೃತಗೊಳಿಸುವ ಪುಣ್ಯ ಕಾಲವಾಗಿದೆ. ನಮ್ಮ ನಾಡಿನ ಹೆಮ್ಮೆಯ ಕಲೆ ಯಕ್ಷಗಾನವು ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ಧರ್ಮ, ಸಂಸ್ಕøತಿ ಮತ್ತು ಸತ್ಪ್ರಜೆಗಳನ್ನು ರೂಪಿಸುವ ಜೀವಂತ ಸಂಸ್ಕಾರ ಮಾಧ್ಯಮ. ಇಂತಹ ಪುಣ್ಯ ಕ್ಷೇತ್ರದಲ್ಲಿ ದೇವಿಯ ಆರಾಧನೆಯೊಂದಿಗೆ ಕಲೆಯ ಸೇವೆ ನಿರಂತರವಾಗಿ ನಡೆಯುತ್ತಿದೆ" ಎಂದು ನುಡಿದರು.


ಸಮಾರೋಪ ಭಾಷಣ ಮಾಡಿದ ಡಾ. ಮನೋಹರ ರಾವ್ ಕಲ್ಲಕಟ್ಟ ಅವರು, ಯಕ್ಷಗಾನ ರಂಗದಲ್ಲಿ ಕಾಲಕ್ಕೆ ತಕ್ಕಂತೆ ಆಗಬೇಕಾದ ನಾವೀನ್ಯತೆಗಳ ಮಹತ್ವವನ್ನು ವಿವರಿಸಿದರು. "ಯಕ್ಷಗಾನ ಕಲೆಯು ತನ್ನ ಮೂಲ ಚೌಕಟ್ಟು ಹಾಗೂ ಮೌಲ್ಯಗಳನ್ನು ಕಳೆದುಕೊಳ್ಳದೆ, ಇಂದಿನ ಯುವ ಪೀಳಿಗೆ ಹಾಗೂ ಹೊಸ ತಲೆಮಾರನ್ನು ಆಕರ್ಷಿಸುವಂತೆ ಹೊಸತನವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಕಲೆ ಮುಂದಿನ ತಲೆಮಾರಿಗೆ ಯಶಸ್ವಿಯಾಗಿ ದಾಟಲು ಸಾಧ್ಯ" ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇರಳ ರಾಜ್ಯ ಲೆಕ್ಕ ಪರಿಶೋಧಕ ಅಧಿಕಾರಿ  ಗೋಪಾಲಕೃಷ್ಣ ಪಿ., ನೀರ್ಚಾಲು ಕರ್ನಾಟಕ ಬ್ಯಾಂಕ್ ಪ್ರಬಂಧಕ ಬಿ. ಸತ್ಯನಾರಾಯಣ ಹೊಳ್ಳ ಹಾಗೂ ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ ಉಪಸ್ಥಿತರಿದ್ದರು.ಭಾಗವತ ಡಾ.ಸತ್ಯನಾರಾಯಣ ಪುಣಿಚಿತ್ತಾಯ ಮಾತನಾಡಿದರು. ಅನಂತ ಪ್ರಜ್ವಲ್ ಉಪಾಧ್ಯಾಯ, ಪ್ರಸನ್ನಕುಮಾರಿ ಮರ್ದಂಬೈಲು ಹಾಗೂ ವಿದ್ಯಾಶಾರದ ಜಿ.ಕೆ. ಸಹಕರಿಸಿದರು.

ಪ್ರಾರಂಭದಲ್ಲಿ ಶ್ರೀಮತಿ ಶ್ರೀದೀಕ್ಷಾ ಸತೀಶ್ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರೊ. ಎ.ಶ್ರೀನಾಥ್ ಕೊಲ್ಲಂಗಾನ ಸ್ವಾಗತಿಸಿ, ದೀಕ್ಷಾ ಸತೀಶ್ ವಂದಿಸಿದರು. ಪತ್ರಕರ್ತ ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು. 

ಬಳಿಕ ಶ್ರೀದೇವರ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಭೋಜನ ಪ್ರಸಾದದೊಂದಿಗೆ ನವರಾತ್ರಿ ಉತ್ಸವ ಸಮಾಪ್ತಿಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries