HEALTH TIPS

ನಟಿ ರೂಪಶ್ರೀ ವರ್ಕಾಡಿ ಅವರಿಗೆ ಹುಟ್ಟೂರ ಸನ್ಮಾನ

ಮಂಜೇಶ್ವರ: ವರ್ಕಾಡಿ ಸುಂಕದಕಟ್ಟೆಯಲ್ಲಿ ದಸರಾ ಹಾಗೂ ಆಯುಧ ಪೂಜೆಯ ಸಂದರ್ಭದಲ್ಲಿ ಚಲನಚಿತ್ರ ನಟಿ, ರಂಗಕಲಾವಿದೆ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಅವರಿಗೆ ಹುಟ್ಟೂರಿನ ಗ್ರಾಮಸ್ಥರು ಹಾಗೂ ಗಣ್ಯರು ಸೇರಿ ಆತ್ಮೀಯವಾಗಿ ಸನ್ಮಾನಿಸಿದರು.

ತಮ್ಮ ಕಲಾ ಸಾಧನೆಯ ಮೂಲಕ ನಾಡಿಗೆ ಗೌರವ ತಂದ ರೂಪಶ್ರೀ ಅವರನ್ನು ಗೌರವಿಸಿದ ಗೋಪಾಲ ಶೆಟ್ಟಿ ಅರಿಬೈಲ್ ನೆತ್ಯ ಅವರು, ಅವರ ಮುಂದಿನ ಕಲಾ ಪಯಣ ಇನ್ನಷ್ಟು ಯಶಸ್ವಿಯಾಗಲಿ, ಹೆಚ್ಚಿನ ಪ್ರಶಸ್ತಿ ಮತ್ತು ಗೌರವಗಳು ಲಭಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ಅರ್ಚಕ ಅವಿನಾಶ್ ಹೊಳ್ಳ ಅವರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸದಾಶಿವ ನಾಯ್ಕ್ ಮಂಟಮೆ, ಪದ್ಮನಾಭ ಶೆಟ್ಟಿ ತಿಮಂಗುರು, ಜಗನ್ನಾಥ ಟೈಲರ್, ಪ್ರಶಾಂತ್, ವಸಂತ ನಾಯ್ಕ್, ದೇವರಾಜ್ ಪೂಜಾರಿ, ಜನಾರ್ದನ ನಾಯ್ಕ್ ಪಾದೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ನಟಿ ರೂಪಶ್ರೀ ಅವರಿಗೆ ಶುಭ ಹಾರೈಸಿದರು.

ತಮ್ಮ ಊರಿನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದ ಗ್ರಾಮಸ್ಥರ ಪ್ರೀತಿ ಮತ್ತು ಅಭಿಮಾನಕ್ಕೆ ರೂಪಶ್ರೀ ಅವರ ಸಾಧನೆ ಮತ್ತಷ್ಟು ಮೆರುಗು ನೀಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries