ಕಾಸರಗೋಡು: ಜಿ.ವಿ. ರಾಜ ಅವರ ಜನ್ಮದಿನದ ಅಂಗವಾಗಿ ಬಾನಂ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಸರಗೋಡು ಜಿಲ್ಲಾ ಹ್ಯಾಂಡ್ಬಾಲ್ ಅಸೋಸಿಯೇಷನ್ನ ಸಂಯುಕ್ತ ಆಶ್ರಯದಲ್ಲಿ ಸ್ನೇಹಪರ ಹ್ಯಾಂಡ್ಬಾಲ್ ಪಂದ್ಯಾಟ ನಡೆಯಿತು.
ವಿವಿಧ ವಿಭಾಗಗಳಲ್ಲಿ ನಾಲ್ಕು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದವು.
ಕೋಡೋಂ-ಬೇಳೂರು ಗ್ರಾಮ ಪಂಚಾಯಿತಿಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಭೂಪೇಶ್ ಪಂದ್ಯಾಟವನ್ನು ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಪಿ. ರಾಜೀವನ್ ಅಧ್ಯಕ್ಷತೆ ವಹಿಸಿದ್ದರು. ಕೋಡೋಂ-ಬೇಳೂರು ಗ್ರಾಮ ಪಂಚಾಯಿತಿ ಸದಸ್ಯೆ ಬಿ. ಅಜಿತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರಾಜ್ಯ ಮಟ್ಟದ ರೆಫರಿ ಹಾಗೂ ತರಬೇತುದಾರ ಕೆ.ಎಸ್. ಸಂಜಯ್, ಪಿ. ದಿವಾಕರನ್, ಯು. ಮಾಯಾದೇವಿ, ಬಾನಂ ಕೃಷ್ಣನ್, ಪಾಚೇನಿ ಕೃಷ್ಣನ್, ಅನೂಪ್ ಪೆರಿಯಲ್, ಪ್ರವೀಣ್ ಪೂಂಗೋಡ್ ಹಾಗೂ ಟಿ.ಎನ್. ಪ್ರವೀಣ್ ಮಾತನಾಡಿದರು.
ಪಿ.ಕೆ. ಬಾಲಚಂದ್ರನ್ ಸ್ವಾಗತಿಸಿದರು. ಸಿನಿ ಮನೋಜ್ ವಂದಿಸಿದರು.



