ಕಾಸರಗೋಡು: ವಿಶ್ವ ಹೆಣ್ಮಕ್ಕಳ ದಿನವನ್ನು ಪ್ರಗತಿ ವಿಶೇಷ ವಿಕಲಚೇತನ ಶಾಲೆಯ ಮಕ್ಕಳ ಜೊತೆಗೆ ಕಾಸರಗೋಡು ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಅವರು ತಮ್ಮಕಚೇರಿಯಲ್ಲಿ ವಿಶೇಷವಾಗಿ ಆಚರಿಸಿಕೊಂಡರು.
ವಿಶೇಷ ಮಕ್ಕಳೊಂದಿಗೆ ಒಬ್ಬರಾಗಿ ಬೆರೆತು ವಿವಿಧ ವಿಷಯಗಳ ಬಗ್ಗೆಮಕ್ಕಳೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಐಪಿಎಸ್, ಎಎಸ್‍ಪಿ ಅಚ್ಯುತ್ ಅಶೋಕ್ ಐಪಿಎಸ್, ಪ್ರಗತಿ ಶಾಲಾ ಟ್ರಸ್ಟಿನ ಉಪಾಧ್ಯಕ್ಷ ಅಶೋಕ ರೈ ಎಂ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ವಿಶೇಷ ಮಕ್ಕಳಿಗೆ ಸಿಹಿ ತಿನಿಸು ನೀಡಿ ಬೀಳ್ಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯ ಉದಯಕುಮಾರ್ ಸ್ವಾಗತಿಸಿ, ಶಾಲೆಯ ಕಾರ್ಯಚಟುವಟಿಕೆಗಳ ಕಿರು ಪರಿಚಯ ನೀಡಿದರು. ಅಧ್ಯಾಪಿಕೆ ಅಶ್ವತಿ ವಂದಿಸಿದರು.


