HEALTH TIPS

ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಪ್ರತಿಷ್ಠಾನ-ಅಧ್ಯಕ್ಷರಾಗಿ ಕುಂಟಾರು ರವೀಶ ತಂತ್ರಿ ಆಯ್ಕೆ

ಕಾಸರಗೋಡು: ಬಹುಭಾಷಾ ವಿದ್ವಾಂಸ, ತುಳುಲಿಪಿ ಶೋಧಕ, ಕವಿ  ದಿವಂಗತ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರ ಹೆಸರಲ್ಲಿ 'ಪುವೆಂಪು ಪ್ರತಿಷ್ಠಾನ, ಕಾಸರಗೋಡು' ರಚನೆಗೊಂಡಿದ್ದು, ಪ್ರತಿಷ್ಠಾನದ ಅಧ್ಯಕ್ಷರಾಗಿ ಧಾರ್ಮಿಕ ಸಾಮಾಜಿಕ ಮುಂದಾಳು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಆಯ್ಕೆಯಾಗಿದ್ದಾರೆ. 


ಪುಣಿಂಚಿತ್ತಾಯರ ಪುತ್ರ, ಕವಿ ವಿಜಯರಾಜ ಪುಣಿoಚಿತ್ತಾಯ ಅವರು ವ್ಯವಸ್ಥಾಪಕ ಟ್ರಸ್ಟಿ, ಪತ್ರಕರ್ತ ರವಿ ನಾಯ್ಕಾಪು ಅವರು  ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಟ್ರಸ್ಟಿಗಳಾಗಿ ಪೆÇ್ರ. ಎ. ಶ್ರೀನಾಥ್, ಅರಿಬೈಲು ಗೋಪಾಲ ಶೆಟ್ಟಿ, ರಾಘವ ಚೇರಾಲ್, ಮಂಜುನಾಥ ಆಳ್ವ ಮಡ್ವ, ವಕೀಲ ಎಂ. ಎಸ್. ಥೋಮಸ್ ಡಿ ಸೋಜಾ, ಅಖಿಲೇಶ್. ಎ. ಕಯ್ಯಾರ್, ಅಖಿಲೇಶ್ ನಗುಮುಗಮ್, ಹುಸೈನ್ ಕುಬಣೂರು ಅವರನ್ನು ಆಯ್ಕೆ ಮಾಡಲಾಗಿದೆ.

ಪುಂಡೂರು ವೆಂಕಟರಾಜ ಪುಣಿoಚಿತ್ತಾಯ ಅವರು ಕಾಸರಗೋಡಿನ ಸಾಹಿತ್ಯ, ಸಂಸ್ಕøತಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.  ಇವರ ಸ್ಮರಣಾರ್ಥ ಪ್ರತಿಷ್ಠಾನ ಸ್ಥಾಪಿಸಲಾಗಿದ್ದು, ಪುಣಿಂಚಿತ್ತಾಯ ಅವರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜತೆಗೆ ಯುವಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ, ಗಡಿನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಷ್ಠಾನದ ಆಶಯವಾಗಿದೆ ಎಂದು ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries