ಕುಂಬಳೆ: ಸ್ವ- ಉದ್ಯೋಗ ಹಾಗೂ ಆದಾಯವೃದ್ಧಿ ಯೋಜನೆಯಡಿ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಯ್ದ 14 ಎಸ್ಟಿ ಕುಟುಂಬಗಳಿಗೆ ಜೇನು ಕೃಷಿ ಘಟಕಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಆಯಿಷಾ ಶಮೀಮ್ ಫಿದಾ ಅವರು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಇ.ಕೆ. ಮೊಹಮ್ಮದ್ ಕುಂಜಿ ಉಪಸ್ಥಿತರಿದ್ದರು.
ಪ್ರತಿ ಕುಟುಂಬಕ್ಕೆ ಆರು ಜೇನುನೊಣಗಳ ಕಾಲನಿಗಳು, ಜೇನುಗೂಡುಗಳ ಸ್ಟ್ಯಾಂಡ್, ಸ್ಮೋಕರ್, ಜೇನು ತೆಗೆಯುವ ಯಂತ್ರ ಸೇರಿದಂತೆ ಜೇನು ಕೃಷಿಗೆ ಅಗತ್ಯವಾದ ಪರಿಕರಗಳನ್ನು ವಿತರಿಸಲಾಯಿತು.


