ಮುಳ್ಳೇರಿಯ: ವಿದ್ಯುತ್ ಕಳವು ಮಾಡಿದ ಆರೋಪದ ಮೇರೆಗೆ ಬೋವಿಕಾನ ನಿವಾಸಿ ಅಬ್ದುಲ್ ಹಮೀದ್ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆರ್ಕಳ ಕೆಎಸ್‌ಇಬಿ ಉಪವಿಭಾಗದ ವ್ಯಾಪ್ತಿಯ ಬೋವಿಕಾನ ಮೀನು ಮಾರುಕಟ್ಟೆ ಸಮೀಪದ ಅವರ ಮನೆಯಲ್ಲಿ ವಿದ್ಯುತ್ ಮೀಟರ್‌ನಿಂದ ಸರ್ವಿಸ್ ವೈರ್ ಬದಲಾಯಿಸಿ, ಹೆಚ್ಚುವರಿಯಾಗಿ ಎರಡು ತಂತಿಗಳನ್ನು ಬಳಸಿ ವಿದ್ಯುತ್ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2024ರ ಜನವರಿ 1ರಿಂದ 2026ರ ಅಕ್ಟೋಬರ್ 22ರವರೆಗಿನ ಅವಧಿಯಲ್ಲಿ ನಡೆದಿರುವ ಈ ಕೃತ್ಯದಿಂದ ವಿದ್ಯುತ್ ಇಲಾಖೆಗೆ ₹22,242.06 ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಜಕರಿಯಾ ಎ.ಕೆ. ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


