HEALTH TIPS

ಚೀನಾದೊಂದಿಗಿನ ಸಂಬಂಧವನ್ನು ಮರುಸ್ಥಾಪಿಸಲು ಭಾರತ ಶ್ರಮಿಸುತ್ತಿದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್

ನವದೆಹಲಿ:  ಚೀನಾದೊಂದಿಗಿನ ಸಂಬಂಧವನ್ನು ಮರುಸ್ಥಾಪಿಸಲು ಭಾರತವು ಶ್ರಮಿಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.


ಯಾವುದೇ ದೇಶದೊಂದಿಗೆ ಜಂಟಿ ಉದ್ಯಮಗಳನ್ನು ಆರಂಭಿಸಲು ಭಾರತ ಸಿದ್ಧವಿದೆ. ಆದರೆ, ಅದರಿಂದ ನ್ಯಾಯಯುತವಾದ ಒಪ್ಪಂದ ದೊರೆಯಬೇಕು ಎಂದು ಅವರು ಹೇಳಿದ್ದಾರೆ.

ಬ್ಲೂಮ್ಬರ್ಗ್ ನ್ಯೂ ಎಕಾನಮಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಪಿಯೂಷ್ ಗೋಯಲ್, ನ್ಯಾಯಯುತವಾದ ಒಪ್ಪಂದ ದೊರೆಯುವವರೆಗೆ, ಪರಸ್ಪರ ಸಹಕಾರ ನಿರಂತರವಾಗಿ ಮುಂದುವರಿಯುವ ಭರವಸೆ ಇರುವವರೆಗೆ ಹಾಗೂ ಭೌಗೋಳಿಕ ರಾಜಕೀಯ ಪರಿಸ್ಥಿತಿ ಹದಗೆಡದಿರುವವರೆಗೆ, ಜಗತ್ತಿನ ಎಲ್ಲ ದೇಶಗಳೊಂದಿಗೂ ಸಹಕರಿಸಲು ನಾವು ಸಿದ್ಧರಿದ್ದೇವೆ. ಈ ಹಿಂದೆ ನಮಗೆ ಕೆಲವು ಆತಂಕಗಳಿದ್ದವು ಎಂದು ನಾನು ಭಾವಿಸುತ್ತೇನೆ. ಚೀನಾದೊಂದಿಗೆ ಸಂಬಂಧಗಳನ್ನು ಮರುಸ್ಥಾಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಈ ಪಯಣದ ಅಂತಿಮ ಅಧ್ಯಾಯ ಇನ್ನೂ ಬರೆಯಲ್ಪಟ್ಟಿಲ್ಲ" ಎಂದು ಅವರು ಹೇಳಿದರು.

ಚೀನಾ ಭಾರತದ 2ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಪಿಯೂಷ್ ಗೋಯಲ್ ಅವರ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ. 2024-25ರಲ್ಲಿ 118.39 ಶತಕೋಟಿ ಡಾಲರ್ಗಳಷ್ಟಿದ್ದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2025-26ರಲ್ಲಿ ಶೇ.7.9ರಷ್ಟು ಏರಿಕೆಯಾಗಿ 127.7 ಶತಕೋಟಿ ಡಾಲರ್‌ಗೆ ತಲುಪಿದೆ.

2024-25ರಲ್ಲಿ 14.25 ಶತಕೋಟಿ ಡಾಲರ್‌ಗಳಷ್ಟಿದ್ದ ಚೀನಾಕ್ಕೆ ಭಾರತದ ರಫ್ತು 2025-26ರಲ್ಲಿ ಶೇ. 36.62ರಷ್ಟು ಹೆಚ್ಚಾಗಿ 19.47 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಮತ್ತೊಂದೆಡೆ, ಇದೇ ಅವಧಿಯಲ್ಲಿ ಚೀನಾದಿಂದ ಭಾರತದ ಆಮದು ಶೇ.16ರಷ್ಟು ಹೆಚ್ಚಾಗಿ 131.62 ಶತಕೋಟಿ ಡಾಲರ್‌ಗೆ ತಲುಪಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2026ರ ಸೆಪ್ಟೆಂಬರ್ 12ರಂದು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries