ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ನಡೆದ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವಿ ಯಕ್ಷಗಾನ ಕಲಾಸಂಘದ ವತಿಯಿಂದ ‘ಶಲ್ಯ ಸಾರಥ್ಯ’ ಕಥಾಭಾಗದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಪಾತ್ರವರ್ಗದಲ್ಲಿ ರಾಜಾರಾಮ್ ರಾವ್ ಮೀಯಪದವು, ನಾರಾಯಣ ನಾವಡ ಮೂಡಂಬೈಲು, ಚಂದ್ರಕುಮಾರ್ ಬಲಿಪಗುಳಿ, ಶಾಶ್ವತೀ ನಾವಡ ಮೂಡಂಬೈಲು ಹಾಗೂ ಶಾರ್ವರೀ ನಾವಡ ಮೂಡಂಬೈಲು ಭಾಗವಹಿಸಿ ಕಲಾಪ್ರದರ್ಶನ ನೀಡಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಮಯ್ಯ ವರ್ಕಾಡಿ ನಿರ್ವಹಿಸಿದರು. ಚೆಂಡೆ ಮತ್ತು ಮೃದಂಗದಲ್ಲಿ ಸ್ಕಂದರಾಜ್ ಮಯ್ಯ ವರ್ಕಾಡಿ ಹಾಗೂ ಶ್ರೀಕುಮಾರ್ ಮಯ್ಯ ವರ್ಕಾಡಿ ಸಹಕರಿಸಿದರು.


