ಕಾಸರಗೋಡು: ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಗಂಭೀರ ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆಯಲ್ಲಿದ್ದ ಬೇಡಗಂ ತೋರ ನಿವಾಸಿ ದಿ. ನಾರಾಯಣನ್ ಎಂಬವರ ಪುತ್ರಿ ಹರಿಶ್ರೀ (40)ಸಾವಿಗೀಡಾಗಿದ್ದಾರೆ.
ಜುಲೈ 21ರಂದು ಮನೆಯ ಶೌಚಗೃಹದಲ್ಲಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡಿದ್ದು, ನಂತರ ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ನಂತರ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ.
ಕೆಲವು ದಿವಸಗಳ ಹಿಂದೆ ಇವರನ್ನು ಪ್ಲಾಸ್ಟಿಕ್ ಸರ್ಜರಿಗೊಳಪಡಿಸಲಾಗಿತ್ತು. ಹರಿಶ್ರೀ ಅವರ ಚಿಕಿತ್ಸೆಗಾಗಿ ಊರವರು ಹಣ ಸಂಗ್ರಹಿಸಿ ನೀಡಿದ್ದರು.


