ಕಾಸರಗೋಡು: ಉದುಮ ಶಾಸಕ ಕೆ. ನೀಲಕಂಠನ್ ಅವರ ಪೊಯಿನಾಚಿಯಲ್ಲಿರುವ ಕಚೇರಿಗೆ ಉದುಮ ಕ್ಷೇತ್ರದ ಬಿಜೆಪಿ ಸಮಿತಿಯ ನೇತೃತ್ವದಲ್ಲಿ, ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಕೇರಳ ಭೇಟಿ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಭದ್ರತೆಯಲ್ಲಿ ಉಂಟಾದ ಲೋಪ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಅವರ ಮೇಲೆ ನಡೆದ ಹಲ್ಲೆ ಹಾಗೂ ಬಿಜೆಪಿ ರಾಜ್ಯ ಸಮಿತಿ ಕಚೇರಿಯ ಮೇಲಿನ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಪೆÇಯಿನಾಚಿ ಪೇಟೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಪೆÇಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ತಡೆಯುತ್ತಿದ್ದಂತೆ ಉದ್ವಿಗ್ನಗೊಂಡ ಪ್ರತಿಭಟನಾಕರರು ಮುನ್ನುಗ್ಗಲು ಯತ್ನಿಸುತ್ತಿದ್ದಂತೆ ಪೆÇಲೀಸರು ಪ್ರತಿಭಟನಾಕಾರರ ವಿರುದ್ಧ ಜಲಫಿರಂಗಿ ಬಳಸಿ ತಡೆಯಲೆತ್ನಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಎಲ್. ಅಶ್ವಿನಿ ಪ್ರತಿಭಟನಾ ಧರಣಿ ಉದ್ಘಾಟಿಸಿದರು. ಉದುಮ ಕ್ಷೇತ್ರದ ಅಧ್ಯಕ್ಷ ಪ್ರದೀಪ್ ಎಂ.ಕೂಟ್ಟಕ್ಕಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಕಾರ್ಯದರ್ಶಿಗಳಾದ ಪ್ರಮೀಳಾ ಮಜಲ್, ಕೆ.ಟಿ. ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯರಾದ ರಜನಿ ದೇವಿ, ಕಾತ್ರ್ಯಾಯನಿ ಪುಲ್ಲೂರ್, ಕಾತ್ರ್ಯಾಯನಿ ಚಟ್ಟಂಚಾಲ್, ವಿನಯಕುಮಾರ್ ಕೊಟ್ಟಿಕ್ಕುಳಂ, ಮತ್ತು ಸದಾಶಿವನ್ ಮಣಿಯಂಕಾನಂ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ವಿನಿಲ್ ಕುಮಾರ್‍ಮುಲ್ಲಚೇರಿ, ಸೌಮ್ಯ ಪದ್ಮನಾಭನ್, ಉಪಾಧ್ಯಕ್ಷರಾದ ಎ.ಎಂ. ಮುರಳೀಧರನ್ ಪೆರಿಯ, ರಾಜೇಂದ್ರನ್, ಮತ್ತು ಮಧು ಮಂಡಲಿಪ್ಪಾರ, ಕಾರ್ಯದರ್ಶಿಗಳಾದ ಶೋಭಾ ಸದಾನಂದನ್, ಶ್ಯಾಮ್ ಕಾಶಿ, ಮತ್ತು ಸುಜಿತ್ ದಾಸ್, ಖಜಾಂಚಿ ವಿ.ಎ. ರತೀಶ್, ಮಹಿಳಾ ಮೋರ್ಚಾ ಮಂಡಲಂ ಅಧ್ಯಕ್ಷೆ ಆಶಾಲತಾ ಮೊದಲಾದವರು ಉಪಸ್ಥಿತರಿದ್ದರು.


