HEALTH TIPS

ಬಿಇಎಂ ಪ್ರೌಢಶಾಲಾ ನೂತನ ಅಡುಗೆ ಶಾಲೆ ಉದ್ಘಾಟನೆ

ಕಾಸರಗೋಡು: ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಅವರ ಆಸ್ತಿ ಅಭಿವೃದ್ಧಿ ನಿಧಿಯನ್ನು ಬಳಸಿ ಕಾಸರಗೋಡು ಬಿಇಎಂ ಪ್ರೌಢಶಾಲೆಯಲ್ಲಿ ನಿರ್ಮಿಸಲಾದ ನೂತನ ಅಡುಗೆ ಕೊಠಡಿ ಸೌಲಭ್ಯವನ್ನು ಶಾಸಕ ಕಲ್ಲಟ್ರ ಮಾಹಿನ್ ಉದ್ಘಾಟಿಸಿದರು. 

ಈ ಸಂದರ್ಭ ಮಾತನಾಡಿದ ಅವರು, ಎಲ್ಲಾ ವಿದ್ಯಾರ್ಥಿಗಳಿಗೂ ಪೌಷ್ಟಿಕ ಹಾಗೂ ಶುಚಿತ್ವದಿಂದ ಕೂಡಿದ ಮಧ್ಯಾಹ್ನದ ಬಿಸಿಯೂಟ ಲಭ್ಯವಾಗಿಸುವುದು ಸರ್ಕಾರದ ಧೋರಣೆಯಾಗಿದ್ದು, ಇದಕ್ಕೆ ಸಂಬಂಧಿಸಿ ಪೂರಕ ವ್ಯವಸ್ಥೆ ನಡೆಸಿಕೊಡಲುಸರ್ಕಾರ ಮುಂದಾಗಿರುವುದಾಗಿ ತಿಳಿಸಿದರು. ಕಾಸರಗೋಡು ನಗರಸಭಾಧ್ಯಕ್ಷೆ  ಶಾಹೀನಾ ಸಲೀಂ ಸಮರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಕಾಸರಗೋಡು ನಗರಸಭೆಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿದ್ಯಾಶ್ರೀ, ಕೌನ್ಸಿಲರ್ ರಾಮಕೃಷ್ಣ ಹೊಳ್ಳ, ಎಇಒ ಶಶಿಧರ ಎಂ., ಪಿಟಿಎ ಅಧ್ಯಕ್ಷ ಹರೀಶ್ ಕೆ.ಆರ್. ಮತ್ತು ಪಿಟಿಎ ಉಪಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries