HEALTH TIPS

ಭಕ್ತ ಸಮೂಹದ ಮನ ಸೂರೆಗೊಂಡ 'ಸನಾತನಮ್ ಭಜನ್ಸ್' ನಾದಸುಧೆ

ಮಂಜೇಶ್ವರ: ಹೊಸಂಗಡಿ ಆದಿ ಶಕ್ತಿ ರಕ್ತೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ನಡೆದ ಮಂಜೇಶ್ವರದ 'ಸನಾತನಮ್ ಭಜನ್ಸ್' ತಂಡದ 'ಭಜನ್ ಸಂಧ್ಯಾ' ಕಾರ್ಯಕ್ರಮವು ಭಕ್ತರನ್ನು ಎರಡು ಗಂಟೆಗಳ ಕಾಲ ಮಂತ್ರಮುಗ್ಧಗೊಳಿಸಿತು. ಭಗವನ್ನಾಮ ಸಂಕೀರ್ತನೆಯ ಮೂಲಕ ಭಕ್ತರಿಗೆ ಧನಾತ್ಮಕ ಶಕ್ತಿ ತುಂಬಿ, ಆಧ್ಯಾತ್ಮಿಕ ಪುಳಕ ಮೂಡಿಸುವಲ್ಲಿ ತಂಡ ಯಶಸ್ವಿಯಾಯಿತು.


ದರ್ಶಕ್ ಭಾಸ್ಕರ್ ಅವರ ಗಂಭೀರ ಕಂಠಸಿರಿ, ಯಜ್ಞೇಶ್ ಬಾಯಾರು ಅವರ ತಾರಸ್ಥಾಯಿಯ ದೇಸಿ ಗಾಯನ ಹಾಗೂ ಹಿರಿಯ ಗಾಯಕರಾದ ಸತ್ಯವಿಜಯ ಮತ್ತು ಗಣೇಶ್ ಬಿ.ಎಂ. ಅವರ ಮಧುರ ಸಾಥ್ ಕೇಳುಗರನ್ನು ಭಕ್ತಿಸಾಗರದಲ್ಲಿ ತೇಲಿಸಿತು. ಸಮರ್ಥ ಮಂಗಳೂರು ಅವರ ಕೊಳಲ ನಾದ, ತೇಜಸ್ ಕೊಲ್ಲಂಗಾನ ಮತ್ತು ಧನುಷ್ ಎಸ್.ಕೆ. ಅವರ ತಬಲಾ ವಾದನ ಗಾಯನಕ್ಕೆ ಕಳೆಗಟ್ಟಿತು.

ಕೀಬೋರ್ಡ್‍ನಲ್ಲಿ ಶಿವಾನಂದ ಮಾಯಿಪ್ಪಾಡಿ, ರಿದಂ ಪ್ಯಾಡ್‍ನಲ್ಲಿ ಪ್ರದೀಪ್ ಮುಡೂರ್ ಹಾಗೂ ಹಾರ್ಮೋನಿಯಂನಲ್ಲಿ ಶ್ರಾವಣ್ಯ ಸಾಥ್ ನೀಡಿದರು. ತಾರಾನಾಥ, ಕೃಷ್ಣ ಪ್ರಸಾದ್ ಮತ್ತು ದಯಾ ಪ್ರಸನ್ನ ಕೋರಸ್‍ನಲ್ಲಿ ಧ್ವನಿಗೂಡಿಸಿದರು. ಮೋಹನ ಚಂದ್ರ ಅವರ ನೇತೃತ್ವದಲ್ಲಿ ಮೂಡಿಬಂದ ಈ ಅಪೂರ್ವ ಭಕ್ತಿ ಸಂಜೆ, ನೆರೆದಿದ್ದ ಭಕ್ತಸಮೂಹದ ಕರತಾಡನದೊಂದಿಗೆ ಮನಸೂರೆಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries