HEALTH TIPS

ಇರಾನ್ ಮೇಲೆ 'ಮದರ್ ಆಫ್ ಆಲ್ ಬಾಂಬ್ಸ್' ಪ್ರಯೋಗಿಸಲು ಅಮೆರಿಕ ಚಿಂತನೆ: ವರದಿ

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಸ್ಥಿತಿ ಮುುಂದುವರಿದಿರುವ ನಡುವೆ ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಪರಮಾಣು ರಹಿತ ಅತ್ಯಂತ ಪ್ರಭಾವಶಾಲಿ ಬಾಂಬ್ ಬೀಳಿಸಲು ಅಮೆರಿಕ ಚಿಂತನೆ ನಡೆಸಿದೆ ಎಂದು 'ಸಿಎನ್‌ಎನ್‌' ವರದಿ ಮಾಡಿದೆ.


'ಮದರ್ ಆಫ್ ಆಲ್ ಬಾಂಬ್ಸ್'ಎಂದೇ ಕರೆಯಲ್ಪಡುವ 'ಜಿಬಿಯು-43/ಬಿ ಮ್ಯಾಸಿವ್ ಆರ್ಡ್ನೆನ್ಸ್ ಏರ್ ಬ್ಲಾಸ್ಟ್' (ಎಂಒಎಬಿ) ಬಾಂಬ್‌ ಅನ್ನು ಇರಾನ್‌ನ ಇಂಧನ ಮೂಲಸೌಕರ್ಯ ಹಾಗೂ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸೇನೆ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಯಾವುದೇ ಕಾರಣಕ್ಕೂ ಇರಾನ್ ಅಣ್ವಸ್ತ್ರವನ್ನು ಹೊಂದಲು ಬಿಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಅಲ್ಲದೆ ಇರಾನ್ ಮೇಲೆ ಯುದ್ಧ ಹಾಗೂ ಆರ್ಥಿಕ ನಿರ್ಬಂಧಗಳ ನೀತಿಯನ್ನು ಅನುಸರಿಸಿದ್ದಾರೆ.

ಆದರೆ ಮದರ್ ಆಫ್ ಆಲ್ ಬಾಂಬ್ಸ್ ಪ್ರಯೋಗದಿಂದ ಇರಾನ್‌ನ ನೆಲದಡಿಯ ಪರಮಾಣು ನೆಲೆಗಳನ್ನು ನಾಶಪಡಿಸಲು ಸಾಧ್ಯವೇ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಾಂಬ್ ವಿಶಾಲವಾದ ಪ್ರದೇಶವನ್ನು ಧ್ವಂಸಗೊಳಿಸಬಹುದು. ಆದರೆ ನೆಲದಡಿಯಲ್ಲಿ ಆಳದಲ್ಲಿರುವ ಬಂಕರ್‌ಗಳನ್ನು ಭೇದಿಸಿ ಸ್ಫೋಟಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಸಿಎನ್‌ಎನ್‌ಗೆ ತಿಳಿಸಿದ್ದಾರೆ.

2017ರಲ್ಲಿ ಅಫ್ಗಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಸುರಂಗ ಮತ್ತು ಬಂಕರ್‌ಗಳನ್ನು ನಾಶಪಡಿಸಲು ಅಮೆರಿಕ ಸೇನೆಯು ಇದೇ 'ಮದರ್ ಆಫ್ ಆಲ್ ಬಾಂಬ್ಸ್' ಅಸ್ತ್ರವನ್ನೇ ಬಳಸಿತ್ತು. ಆ ದಾಳಿಯಲ್ಲಿ 90ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು.

ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗೆ ಮುನ್ನ ಕುಗ್ಗಿರುವ ತಮ್ಮ ಜನಪ್ರಿಯತೆಯನ್ನು ಮರಳಿ ಪಡೆಯಲು ಟ್ರಂಪ್ ಯತ್ನಿಸುತ್ತಿದ್ದಾರೆ. ಆದರೆ, ಇರಾನ್ ಯುದ್ಧದಿಂದಾಗಿ ಜನಪ್ರಿಯತೆ ಕುಸಿದಿದ್ದು, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟುಮಾಡಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಕಳೆದ ಫೆಬ್ರುವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಸಂಘರ್ಷವನ್ನು ಶಮನಗೊಳಿಸಲು ನಡೆಸಿದ ರಾಜತಾಂತ್ರಿಕ ಪ್ರಯತ್ನಗಳು ವಿಫಲಗೊಂಡಿದ್ದವು.







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries