HEALTH TIPS

ಭಾರತದ ಸಮಾಜ ಸೇವಕಿ ರೀಮಾ ನಾನಾವತಿಗೆ ಹಿಲರಿ ರೋಧಮ್ ಕ್ಲಿಂಟನ್ ಪ್ರಶಸ್ತಿ

ವಾಷಿಂಗ್ಟನ್: ಮಹಿಳಾ ಸಬಲೀಕರಣ, ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಮಾಡಿದ ಸಮಾಜ ಸೇವೆಗಾಗಿ ಭಾರತದ ಸಮಾಜ ಸೇವಕಿ ರೀಮಾ ನಾನಾವತಿ ಅವರಿಗೆ ಅಮೆರಿಕದ ಪ್ರತಿಷ್ಠಿತ ಜಾರ್ಜ್‌ಟೌನ್ ಸಂಸ್ಥೆ ನೀಡುವ 'ಹಿಲರಿ ರೋಧಮ್ ಕ್ಲಿಂಟನ್ ಪ್ರಶಸ್ತಿ-2026' ಅನ್ನು ಗುರುವಾರ(ಅ.15) ಪ್ರದಾನ ಮಾಡಲಾಗಿದೆ. 


ರೀಮಾ ನಾನಾವತಿ ಅವರು ಭಾರತದ ಸ್ವಯಂ ಉದ್ಯೋಗಿ ಮಹಿಳಾ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ದೇಶದ ಅಸಂಘಟಿತ ವಲಯದ ಕಾರ್ಮಿಕರ ಅತಿದೊಡ್ಡ ಒಕ್ಕೂಟವಾಗಿದೆ.

ಮಹಿಳಾ ಕೇಂದ್ರಿತ ಉದ್ಯಮಗಳು, ಕೃಷಿ ಕೇಂದ್ರಿತ ಉದ್ಯಮಗಳು, ಆಹಾರ ಸಂಸ್ಕರಣೆ, ತ್ಯಾಜ್ಯ ಮರುಬಳಕೆ ಮತ್ತು ಜವಳಿ ಉದ್ಯಮ ಸೇರಿದಂತೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರೀಮಾ ನಾನಾವತಿ ಅವರು ಕೆಲಸ ಮಾಡುತ್ತಿದ್ದಾರೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಅಲ್ಲಿನ ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯಗಳನ್ನು ಕಲ್ಪಿಸಿಕೊಡುವುದು ಮತ್ತು ಸಂಕಷ್ಟಪೀಡಿತ ಅಫ್ಗಾನಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪುನರ್ವಸತಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2013ರಲ್ಲಿ ಭಾರತ ಸರ್ಕಾರವು ರೀಮಾ ನಾನಾವತಿ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿತ್ತು.

ಟೋರಿ ಬರ್ಚ್ ಫೌಂಡೇಶನ್‌ನ ಸಂಸ್ಥಾಪಕಿ ಟೋರಿ ಬರ್ಚ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಸ್ ಅವರಿಗೆ ಕೂಡ ಹಿಲರಿ ರೋಧಮ್ ಕ್ಲಿಂಟನ್ ಪ್ರಶಸ್ತಿ-2026 ನೀಡಲಾಗಿದೆ.


Director of @SewaComm, Reema Nanavaty, received the 2026 #HRCAward for her extraordinary leadership empowering millions of women workers, driving climate resilience and economic self-reliance, and rebuilding women-led livelihoods in post-conflict regions globally.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries