ಚೆನ್ನೈ: ಸುಮಾರು ₹ 4,900 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಚೆನ್ನೈ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಪೂನಮಲ್ಲಿ-ವಡಪಳನಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.
ಪ್ರಧಾನಿ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಜಂಟಿಯಾಗಿ ಹೊಸ ಮೆಟ್ರೊ ಸೇವೆಗೆ ಚಾಲನೆ ನೀಡಿದರು. ಬಳಿಕ ಇಬ್ಬರೂ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.
ಈ ಹೊಸ ಮಾರ್ಗವು ಚೆನ್ನೈ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ನಾಲ್ಕನೇ ಕಾರಿಡಾರ್ನ ಭಾಗವಾಗಿದೆ. ಉದ್ಘಾಟನೆಗೊಂಡ ಮಾರ್ಗದಲ್ಲಿ ಸುಮಾರು 15 ಕಿ.ಮೀ. ಉದ್ದಕ್ಕೆ ಒಟ್ಟು 11 ಎತ್ತರಿಸಿದ ಮೆಟ್ರೊ ನಿಲ್ದಾಣಗಳಿವೆ.


