ಬದಿಯಡ್ಕ: ಟಿವಿಎಸ್ ಕಂಪೆನಿಯ ಚೇರ್ಮನ್ ವೇಣು ಶ್ರೀನಿವಾಸನ್ ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದು ಅಚ್ಚರಿ ಮೂಡಿಸಿದರು.
ಖಾಸಗೀ ಕಾರ್ಯಕ್ರಮವೊಂದರಲ್ಲಿ ಬೇಳ ಕುಮಾರಮಂಗಲ ಕ್ಷೇತ್ರಕ್ಕೆ ಆಗಮಿಸಿದ ಅವರ ಹೆಲಿಕಾಪ್ಟರ್ ನೀರ್ಚಾಲು ಶಾಲಾ ಮೈದಾನದಲ್ಲಿ ಬೆಳಿಗ್ಗೆ 10ರ ಸುಮಾರಿಗೆ ಬಂದಿಳಿಯಿತು.
ನೀರ್ಚಾಲು ಪರಿಸರಕ್ಕೆ ಅಪೂರ್ವವಾದ ಹೆಲಿಕಾಪ್ಟರ್ ವೀಕ್ಷಿಸಲು ಅಪಾರ ಸಂಖ್ಯೆಯ ಜನಸಂದಣಿ ಸೇರಿತ್ತು. ನೀರ್ಚಾಲಿನಿಂದ ಕಾರಿನ ಮೂಲಕ ಕುಮಾರಮಂಗಲಕ್ಕೆ ತೆರಳಿದ ಅವರು ಬಳಿಕ ಅರ್ಧ ಗಂಟೆಗಳಲ್ಲಿ ಹಿಂತಿರುಗಿದರು.

.jpg)
.jpg)
