HEALTH TIPS

ಉತ್ತರಾಖಂಡ: ಪ್ರಾಚೀನ ಭಗವತಿ ದೇವಾಲಯ ಬೆಂಕಿಗಾಹುತಿ

ಪಿಥೋರಗಢ: ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಬಡಿಯಾಕೋಟ್ ಪ್ರದೇಶದಲ್ಲಿರುವ ಪುರಾತನ ಭಗವತಿ ದೇವಿ ದೇವಾಲಯವು ಶುಕ್ರವಾರ ಬೆಂಕಿಗೆ ಆಹುತಿಯಾಗಿದೆ.


ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು , ಕಾರಣ ಇನ್ನೂ ತಿಳಿದುಬಂದಿಲ್ಲ. ಈ ದೇವಾಲಯವು ಸಾಂಪ್ರದಾಯಿಕ ಮರದ ವಾಸ್ತುಶಿಲ್ಪ ಮತ್ತು ಸಂಕೀರ್ಣ ಕೆತ್ತನೆಗಳಿಗೆ ಪ್ರಸಿದ್ಧಿಯಾಗಿತ್ತು. 

ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಶಾರ್ಟ್ ಸರ್ಕ್ಯೂಟ್ ಅಥವಾ ದೇವಾಲಯದ ಒಳಗೆ ಭಕ್ತರು ಹಚ್ಚಿದ ದೀಪಗಳಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಕಪ್ಕೋಟ್ ಉಪಪ್ರಭಾಗೀಯ ಕಚೇರಿಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಮಲ್ಲ ದಾನಪುರ ಪ್ರದೇಶದಲ್ಲಿರುವ ಭಗವತಿ ದೇವಾಲಯವು ಹೊತ್ತಿ ಉರಿಯುತ್ತಿರುವುದನ್ನು ಭಕ್ತರು ನೋಡಿದ್ದಾರೆ. ಈ ದುರ್ಗಮ ಪ್ರದೇಶದಲ್ಲಿ ಯಾವುದೇ ಅಗ್ನಿಶಾಮಕ ಸೇವೆಗಳು ಲಭ್ಯವಿಲ್ಲದ ಕಾರಣ, ದೇವಾಲಯವು ಗಂಟೆಗಟ್ಟಲೆ ಉರಿಯುತ್ತಲೇ ಇತ್ತು ಎಂದು ಬದಿಯಾಕೋಟ್ ಗ್ರಾಮದ ನಿವಾಸಿ ಆನ್ ಸಿಂಗ್ ಹೇಳಿದ್ದಾರೆ.

ಅತ್ಯಂತ ಸಂಕೀರ್ಣ ಕರಕುಶಲತೆಗೆ ಹೆಸರಾದ ದೇವಾಲಯವು ನವರಾತ್ರಿಯ ಸಮಯದಲ್ಲಿಯೇ ಸುಟ್ಟು ಭಸ್ಮವಾಗಿರುವುದು ಭಕ್ತರ ದುಃಖಕ್ಕೆ ಕಾರಣವಾಗಿದೆ ಎಂದೂ ಅವರು ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries