HEALTH TIPS

ವೆಂಕಟರಾಜ ಪುಣಿಂಚಿತ್ತಾಯರ ತುಳು ಲಿಪಿ ಸಂಶೋಧನೆ ಐತಿಹಾಸಿಕ: ಕಲಾವಿದ ವೆಂಕಟಕೃಷ್ಣ ಭಟ್

ಬದಿಯಡ್ಕ: ಗಡಿನಾಡು ಕಾಸರಗೋಡಿನ ಹಿರಿಯ ವಿದ್ವಾಂಸ, ಬಹುಭಾಷಾ ಕವಿ ಡಾ. ವೆಂಕಟರಾಜ ಪುಣಿಂಚಿತ್ತಾಯರು ತುಳು ಲಿಪಿಯ ಪುನರುತ್ಥಾನ ಹಾಗೂ ಭಾಷಾ ಪರಂಪರೆಗೆ ನೀಡಿದ ಕೊಡುಗೆ ಚಿರಸ್ಮರಣೀಯ ಎಂದು ಖ್ಯಾತ ವ್ಯಂಗ್ಯಚಿತ್ರಕಾರ ಕೆ. ವೆಂಕಟಕೃಷ್ಣ ಭಟ್ ಎಡನೀರು ಅಭಿಪ್ರಾಯಪಟ್ಟರು.


ಬದಿಯಡ್ಕದ ತುಳು ಭವನದಲ್ಲಿ ನೂತನವಾಗಿ ಅಳವಡಿಸಲಾದ 'ತುಳು ಅಕ್ಷರಮಾಲೆ'ಯನ್ನು ಪರಿಚಯಿಸಿ ಮಾತನಾಡಿದ ಅವರು, "1984ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ವಿಷ್ಣುತುಂಗ ವಿರಚಿತ 'ಶ್ರೀ ಭಾಗವತೋ' ತುಳು ಮಹಾಕಾವ್ಯದ ತಾಡವಾಲೆಗಳಿಂದ ತುಳು ಲಿಪಿಯನ್ನು ಭೂತಕನ್ನಡಿ ಹಿಡಿದು ನಕಲು ಮಾಡಲು ಪುಣಿಂಚಿತ್ತಾಯರ ಜತೆ ಕೈಜೋಡಿಸಿದ್ದೆ. ಆ ಗ್ರಂಥದ 41ನೇ ಪುಟದಲ್ಲಿ ಗುರುಗಳು ನನ್ನ ಹೆಸರನ್ನು ಕೃತಜ್ಞತೆಯೊಂದಿಗೆ ದಾಖಲಿಸಿ ಆಶೀರ್ವದಿಸಿದ್ದರು. ಇದಕ್ಕೆಲ್ಲಾ ಎಡನೀರು ಮಠದ ಅನುಗ್ರಹವೇ ಕಾರಣ" ಎಂದು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಪತ್ರಕರ್ತ ರವಿ ನಾಯ್ಕಾಪು, ಡಾ.ಬೇ.ಸಿ. ಗೋಪಾಲಕೃಷ್ಣ ಭಟ್, ನ್ಯಾಯವಾದಿ ಥೋಮಸ್ ಡಿಸೋಜ, ಅನಿತಾ ಟೀಚರ್, ರಾಜೇಶ್ ಮಾಸ್ತರ್, ಮೊಹಮ್ಮದ್ ಅಲಿ ಪೆರ್ಲ, ತಾರನಾಥ ರೈ, ಹರೀಶ್ ಗೋಸಾಡ, ಲೀಲಾವತಿ ಕನಕಪ್ಪಾಡಿ, ವಸಂತ ಬಾರಡ್ಕ, ಕುಸುಮ, ರಮೇಶ್ ಮಾವಿನಕಟ್ಟೆ, ಕವಿತಾ ಗಿರೀಶ್ ರೈ, ಜ್ಯೋತಿರ್ಲಕ್ಷ್ಮಿ ಹಾಗೂ ಪೆರಡಾಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries