ದುಬೈ: ಸೌದಿ ಅರೇಬಿಯಾದ ಅಧಿಕಾರಿಗಳು ನೀಡುವ ಸುರಕ್ಷತಾ ನಿರ್ದೇಶನಗಳನ್ನು ಪಾಲಿಸುವಂತೆ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಇರಾನ್ ಬೆಂಬಲಿತ ಹೂಥಿ ಬಂಡುಕೋರರು ದಾಳಿ ತೀವ್ರಗೊಳಿಸಿರುವ ಕಾರಣ ಸೌದಿಯಲ್ಲಿರುವ ಭಾರತೀಯರಿಗೆ ಸುರಕ್ಷಿತವಾಗಿರುವಂತೆ ಸೂಚನೆ ನೀಡಲಾಗಿದೆ.
ತುರ್ತು ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡುವ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಅಧಿಕಾರಿಗಳ ನಿರ್ದೇಶನದಂತೆ ಹತ್ತಿರದ ಸುರಕ್ಷಿತ ಜಾಗಕ್ಕೆ ತೆರಳಬೇಕು. ಅಪಾಯದ ಸಮಯ ಕಳೆಯುವವರೆಗೂ ತಾವಿರುವ ಕಟ್ಟಡ, ಕೊಠಡಿಯಲ್ಲೇ ಇರಬೇಕು' ಎಂದು ರಾಯಭಾರ ಕಚೇರಿ ತಿಳಿಸಿದೆ.
'ಗುಂಪು ಸೇರದಿರಿ, ಅಪಾಯಕಾರಿ ಸ್ಥಳಕ್ಕೆ ತೆರಳಬೇಡಿ. ದಾಳಿ ದೃಶ್ಯಗಳ ಚಿತ್ರೀಕರಣ ಪ್ರಯತ್ನ ಮಾಡಬೇಡಿ' ಎಂದು ಸೂಚಿಸಿದೆ.
ಯೆಮನ್ನ ಹೂಥಿ ಬಂಡುಕೋರರು ಇದೇ 10ರಂದು ರಿಯಾದ್ ವಿಮಾನ ನಿಲ್ದಾಣ ಸೇರಿ ಹಲವು ಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದರು. ದಾಳಿಯಲ್ಲಿ ಒಬ್ಬ ಭಾರತೀಯ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಹೀಗಾಗಿ ರಾಯಭಾರ ಕಚೇರಿ ಮುನ್ನೆಚ್ಚರಿಕೆ ನೀಡಿದೆ.



