HEALTH TIPS

ಕನ್ನಡ ರಾಜ್ಯೋತ್ಸವ ಪ್ರಶಸ್ತಿ-ಸಾಧಕರ ಆಯ್ಕೆ ಸಮಿತಿಯಿಂದ ಕಾಸರಗೋಡು ಚಿನ್ನಾ ಹೆಸರು ಕೈಬಿಟ್ಟ ಕ್ರಮಕ್ಕೆ ವಿರೋಧ

ಕಾಸರಗೋಡು: 2026 ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರನ್ನು ಆಯ್ಕೆ ಮಾಡಲು ಕರ್ನಾಟಕ ಸರ್ಕಾರ ಎರಡು ಪ್ರಮುಖ ಸಮಿತಿಗಳನ್ನು ರಚಿಸಿದ್ದು, ಕನ್ನಡ ಸಂಸ್ಕೃತಿ ಇಲಾಖೆ ರಚಿಸಿದ ತಜ್ಞರನ್ನೊಳಗೊಂಡ ಸಲಹಾ ಸಮಿತಿಯಿಂದ ಗಡಿನಾಡು ಪ್ರತಿನಿಧಿಯಾಗಿ ನೇಮಕ ಪಡೆದಿದ್ದ ಕಾಸರಗೋಡು ಚೆನ್ನಾ ಅವರನ್ನು ಸಮಿತಿಯಿಂದಕೈಬಿಟ್ಟಿರುವ ಕ್ರಮಕ್ಕೆ ಗಡಿನಾಡ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಗಡಿನಾಡ ಕನ್ನಡಿಗರಿಗೆ ಎಸೆಗಿದ ವಂಚನೆಯಾಗಿದೆ ಎಂದು ಕನ್ನಡಪರ ಸಂಘಟನೆಗಳು ತಮ್ಮ ಹೇಳಿಕೆ ನೀಡಿದೆ.


ಕಾಸರಗೋಡು ಚಿನ್ನಾ ಅವರನ್ನು ಸಮಿತಿಗೆ ಆಯ್ಕೆ ಮಾಡಿದ ಒಂದೆರಡು ದಿವಸಗಳಲ್ಲೇ ಸೂಕ್ತ ಕಾರಣ ತಿಳಿಸದೆ ಕೈಬಿಡಲಾಗಿದ್ದು, ಈ ಬಗ್ಗೆ ಗಡಿನಾಡ ಕನ್ನಡಿಗರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕನ್ನಡ ಸಂಸ್ಕೃತಿ ಇಲಾಖೆ ರಚಿಸಿದ ತಜ್ಞರನ್ನೊಳಗೊಂಡ ಸಲಹಾ ಸಮಿತಿಯಿಂದ ಕಾಸರಗೋಡು ಚಿನ್ನಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆಯ್ಕೆ ಸಲಹಾ ಸಮಿತಿಯ ಸದಸ್ಯತ್ವ ಸ್ಥಾನದಿಂದ ಕೈಬಿಟ್ಟಿರುವ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಆದೇಶ ಪ್ರಕಟಣೆ ಹೊರಡಿಸಿದ್ದಾರೆ. 

ರಾಜ್ಯೋತ್ಸವ ಪ್ರಶಸ್ತಿಗೆ ಯೋಗ್ಯ ಸಾಧಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಆಯ್ಕೆ ಸಮಿತಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿತ್ತು. 

ಪ್ರಸಕ್ತ ಸಲಹಾ ಸಮಿತಿಗೆ ಗಡಿನಾಡ ಕನ್ನಡಿಗರ ಪ್ರತಿನಿಧಿಯಾಗಿ ಕಾಸರಗೋಡು ಚೆನ್ನಾ ನೇಮಕಾತಿ ನಡೆದಿತ್ತು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಸಲಹಾ ಸಮಿತಿಗೆ ಕಲೆ, ಸಾಹಿತ್ಯ, ಮಾಧ್ಯಮ, ಸಮಾಜಸೇವೆ, ಜಾನಪದ, ಕ್ರೀಡೆ, ರಂಗಭೂಮಿ, ಲಲಿತಕಲೆ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಒಟ್ಟು 52 ಜನರನ್ನು ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಕಾಸರಗೋಡು ಚಿನ್ನಾ ಒಳಗೊಂಡಿದ್ದರು.

ತಾನು ಈ ಹಿಂದೆ ಕರ್ನಾಟಕ ಕೊಂಕಣಿ ಅಕಾಡಮಿ ಅಧ್ಯಕ್ಷನಾಗಿ, ಕೇರಳ ಸಂಗೀತ ನಾಟಕ ಅಕಾಡಮಿ ಸದಸ್ಯ ಸೇರಿದಂತೆ ವಿವಿಧ ಅಕಾಡಮಿ-ಸಂಘಟನೆಗಳಲ್ಲಿ ಸೇವೆಸಲ್ಲಿಸಿದ್ದೇನೆ. ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಸದಸ್ಯತ್ವಕ್ಕಾಗಿ ಅಂಗಾಲಾಚಿಕೊಂಡು ಹೋಗಿಲ್ಲ. ಗಡಿನಾಡ ಕನ್ನಡಿಗರ ಪ್ರತಿನಿಧಿಯಾಗಿ ಆಯ್ಕೆಸಮಿತಿಯಲ್ಲಿ ಸದಸ್ಯನಾಗಿ ಹೆಸರು ಸೇರ್ಪಡೆಗೊಳಿಸಿ ನಂತರ ಸಕಾರಣಗಳಿಲ್ಲದೆ ಹೆಸರು ಕೈಬಿಟ್ಟಿರುವುದರಿಂದ ತನ್ನ ಕನ್ನಡ ಚಟುವಟಿಕೆಗಳಿಗೆ ಯಾವುದೇ ಹಿನ್ನಡೆಯಾಗದು ಎಂದು ಕಾಸರಗೋಡು ಚಿನ್ನಾ ಪ್ರತಿಕ್ರಿಯಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries