ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ 665.67 ಗ್ರಾಂ ಮಾರಕ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೆÇಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೋಂಕಾಲು ಪ್ರತಾಪನಗರ ನಿವಾಸಿಗಳಾದ ಯೂಸುಫ್ ಅಫ್ಜಲ್ (35) ಮತ್ತು ನೌಶಾದಲಿ (40) ಬಂಧಿತರು. ನೀಲೇಶ್ವರ ಪೆÇಲೀಸ್ ಠಾಣೆಯ ಎಸ್ ಐ ಸಿ.ಎಂ. ಸಾಬು ಅವರ ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಮಂಗಲ್ಪಾಡಿ ಪ್ರತಾಪ್ ನಗರ ಸೋಂಕಾಲಿನ ನಿವಾಸಿಗಳಾದ ಪಿ.ಎಚ್. ಅಹಮ್ಮದ್ ರುಕ್ಸಾದ್ (33) ಮತ್ತು ಅಬ್ದುಲ್ ಹಮೀದ್ (30)ರನ್ನು ಪೆÇಲೀಸರು ನೀಲೇಶ್ವರ ರೈಲು ನಿಲ್ದಾಣ ಪರಿಸರದಿಂದ ಬಂಧಿಸಿ ಅವರ ಕೈವಶದಿಂದ 665.67 ಗ್ರಾಂ ಎಂಡಿಎಂಎ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದರು. ಇವರು ಮುಂಬೈಯಿಂದ ಮಂಗಳೂರು ಎಕ್ಸ್‍ಪ್ರೆಸ್ ರೈಲಿನಲ್ಲಿ ಬಂದು ನೀಲೇಶ್ವರ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲೇ ಪಕ್ಕದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇವರನ್ನುತಪಾಸಣೆಗೊಳಪಡಿಸಿದಾಗ ಎಂಡಿಎಂಎ ಪತ್ತೆಯಾಘಿತ್ತು. ಇವರುನೀಡಿದ ಮಾಹಿತಿಯನ್ವಯ ದಂಧೆಯಲ್ಲಿ ಶಾಮೀಲಾಗಿರುವ ಯೂಸುಫ್ ಅಪ್ಜಲ್ ಮತ್ತು ನೌಶಾದಲಿ ಬಗ್ಗೆ ಮಾಹಿತಿ ನೀಡಿದ್ದರು.


