HEALTH TIPS

ಪೊಲೀಸರಲ್ಲಿ ದಾರಿ ಕೇಳಿ, ಕಂಬಿ ಹಿಂದೆ ಸೇರಿದ ಬೈಕ್ ಕಳ್ಳ!

ಕಾಸರಗೋಡು: ಕಳವುಗೈದು ಸಾಗಿಸುತ್ತಿದ್ದ ಬೈಕಲ್ಲಿ ಆಗಮಿಸಿದ ಬೈಕ್‍ಸವಾರನೊಬ್ಬ ಪೆÇಲೀಸರಲ್ಲೇ ದಾರಿಕೇಳಿ ಪರಾರಿಯಾಗಲೆತ್ನಿಸಿದ್ದು, ನಂತರ ಇದೇ ಪೊಲೀಸರ ಅತಿಥಿಯಾಗಿದ್ದಾನೆ. ಈತ ಅಂತಾರಾಜ್ಯ ವಾಹನ ಕಳವು ತಂಡದ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಕಾಸರಗೋಡಿನ ಪೆÇಲೀಸ್ ಸಿಬ್ಬಂದಿ ಸುನೀಶ್ ಕಾರ್ಯಾಚರಣೆ ನಡೆಸಿದವರು.  ಪಯ್ಯನ್ನೂರಿನ ವೆಳ್ಳೂರು ಕೊಟ್ಟಣಚ್ಚೇರಿ ದೇವಸ್ಥಾನ ಸಮೀಪ ಗುರುವಾರ ರಾತ್ರಿ ಘಟನೆ ನಡೆದಿದೆ. ರಾತ್ರಿ ಬೈಕಲ್ಲಿ ಆಗಮಿಸಿದ ಯುವಕ,  ಕಾಸರಗೋಡಿನಲ್ಲಿ ಪೆÇಲೀಸ್ ಸಿಬ್ಬಂದಿಯಾಗಿರುವ ಪೇರಳಂ ನಿವಾಸಿ ಸುನೀಶ್ ಅವರ ಬಳಿ ಕಾಞಂಗಾಡು ಭಾಗಕ್ಕೆ ಸಂಚರಿಸಲಿರುವ ದಾರಿ ಬಗ್ಗೆ ಹಿಂದಿಯಲ್ಲಿ ಮಾಹಿತಿ ಕೇಳಿದ್ದಾನೆ. 

ಯುವಕನಿಗೆ ದಾರಿ ತಿಳಿಸುತ್ತಿದ್ದ ವೇಳೆ ಸುನೀಶ್ ಬೈಕ್‍ನ ನೋಂದಣಿ ಸಂಖ್ಯೆಯನ್ನು ಗಮನಿಸಿದ್ದಾರೆ. ಯುವಕ ಅಲ್ಲಿಂದ ತೆರಳಿದ ನಂತರ ಬೈಕ್‍ನ ನೋಂದಣಿ ಸಂಖ್ಯೆ ಹಾಗೂ ಆತ ಹಿಂದಿಯಲ್ಲಿ ಮಾತನಾಡಿದ ರೀತಿಯಿಂದ ಅನುಮಾನಗೊಂಡ ಸುನೀಶ್, ತಕ್ಷಣ ಕಾಸರಗೋಡು ಪೆÇಲೀಸ್ ನಿಯಂತ್ರಣ ಕೊಠಡಿಯಲ್ಲಿದ್ದ ರಜನೀಶ್ ಎಂಬ ಪೆÇಲೀಸ್ ಸಿಬ್ಬಂದಿಗೆ ಬೈಕ್‍ನ ಸಂಖ್ಯೆ ಬಗ್ಗೆ ತಪಾಸಣೆ ನಡೆಸಿದಾಗ ಇದು ಎರಡು ದಿನಗಳ ಹಿಂದೆ ವಡಗರದಿಂದ ಕಳವಾಗಿದ್ದ ಬೈಕ್‍ನ ನೋಂದಣಿ ಸಂಖ್ಯೆ ಎಂಬುದು ತಿಳಿದುಬಂದಿದೆ. ತಕ್ಷಣ ಸುನೀಶ್ ತಮ್ಮ ಬೈಕ್‍ನಲ್ಲಿ ಯುವಕನನ್ನು ಹಿಂಬಾಲಿಸಿ ಚಿರುವತ್ತೂರಿನಲ್ಲಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಚಂದೇರ ಠಾಣೆ ಪೆÇಲೀಸರು ಬೈಕ್ ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಆರೋಪಿಯನ್ನು ವಡಗರ ಠಾಣೆ ಪೆÇಲೀಸರಿಗೆ ಹಸ್ತಾಂತರಿಸಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries