ಕಾಸರಗೋಡು: ಗೂಗಲ್ ಮ್ಯಾಪ್ನ ಮಾರ್ಗಸೂಚಿ ಅನುಸರಿಸಿ ಸಂಚರಿಸುತ್ತಿದ್ದ ಲಾರಿಯೊಂದು ಬುಲೆಟ್ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿದ ಘಟನೆ ಕುತ್ತಿಕ್ಕೋಲ್ನ ವಟ್ಟಂತಟ್ಟದಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಬುಲೆಟ್ನಲ್ಲಿದ್ದ ಸವಾರರು ಎಸೆಯಲ್ಪಟ್ಟಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಕುತ್ತಿಕ್ಕೋಲ್–ಕಾನತ್ತೂರು ರಸ್ತೆಯ ವಟ್ಟಂತಟ್ಟ ಇಳಿಜಾರಿನಲ್ಲಿ ರಾತ್ರಿ ಸುಮಾರು 8.30ಕ್ಕೆ ಅಪಘಾತ ಸಂಭವಿಸಿದೆ. ತಮಿಳುನಾಡಿನಿಂದ ಕಾಸರಗೋಡಿಗೆ ಬರುತ್ತಿದ್ದ ಲಾರಿ ಚಾಲಕ ಗೂಗಲ್ ಮ್ಯಾಪ್ ನೋಡಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ.
ವಟ್ಟಂತಟ್ಟದ ಇಳಿಜಾರು ತಲುಪಿದಾಗ ಲಾರಿಯ ಬ್ರೇಕ್ ವೈಫಲ್ಯಗೊಂಡು, ಮುಂದೆ ಸಾಗುತ್ತಿದ್ದ ಬುಲೆಟ್ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಬಳಿಕ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಪಕ್ಕದ ಪ್ರಪಾತಕ್ಕೆ ಉರುಳಿದೆ.


