ನವದೆಹಲಿ: ನೈಋತ್ಯ ಮುಂಗಾರು ಗುರುವಾರ ದೇಶದಿಂದ ನಿರ್ಗಮಿಸಿದೆ. ಇದೇ ದಿನ ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಈಶಾನ್ಯ ಹಿಂಗಾರು ಮಳೆ ಚಟುವಟಿಕೆಗಳು ಪ್ರಾರಂಭವಾಗಿವೆ ಎಂದು ಅದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ ಮತ್ತು ಮಾಹೆಯಲ್ಲಿ ಈಶಾನ್ಯ ಹಿಂಗಾರು ಪ್ರಭಾವದಿಂದ ಮಳೆ ಚಟುವಟಿಕೆಗಳು ಕಂಡು ಬಂದಿವೆ ಎಂದು ಅದು ತಿಳಿಸಿದೆ.
''ಈಶಾನ್ಯ ಹಿಂಗಾರು ಆಗಮನದಿಂದ ಅಕ್ಟೋಬರ್ 21ರ ವರೆಗೆ ದಕ್ಷಿಣ ಪರ್ಯಾಯ ದ್ಪೀಪ ಭಾರತದ ಹಲವು ಭಾಗಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ'' ಎಂದು ಹವಾಮಾನ ಇಲಾಖೆ ತನ್ನ ದೈನಂದಿನ ಮುನ್ಸೂಚನೆಯಲ್ಲಿ ತಿಳಿಸಿದೆ.
ಈ ವರ್ಷದ ನೈಋತ್ಯ ಮುಂಗಾರು 769.4 ಮಿ.ಮೀ. ಮಳೆಯೊಂದಿಗೆ ಕೊನೆಗೊಂಡಿದೆ. ಇದು ಸಾಮಾನ್ಯ ಮಳೆಯಾದ 898.6 ಮಿ.ಮೀ.ಗಿಂತ ಶೇಕಡಾ 12.6ರಷ್ಟು ಕಡಿಮೆ.
ಮಳೆ ಕೊರತೆಯ ಹಿಂದಿನ ಪ್ರಮುಖ ಕಾರಣವೆಂದರೆ ಉಷ್ಣ ವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಜೂನ್ನಲ್ಲಿ ಪ್ರಾರಂಭವಾಗಿ, ಕ್ರಮೇಣ ಬಲಗೊಳ್ಳುತ್ತಿರುವ 'ಎಲ್ ನಿನೋ' ಪರಿಸ್ಥಿತಿಗಳು.



