HEALTH TIPS

ಚಂಡಮಾರುತಕ್ಕೆ ಸಜ್ಜಾಗಿ, ಸಂಯಮದಿಂದಿರಿ: ಸಿಬ್ಬಂದಿಗೆ ಪೊಲೀಸ್ ಆಯುಕ್ತ ಕಿವಿಮಾತು

ನವದೆಹಲಿ: ಅ.10ರಂದು ಭಾರಿ ಪ್ರತಿಭಟನೆಗೆ ರಾಷ್ಟ್ರ ರಾಜಧಾನಿ ದೆಹಲಿ ಅಣಿಯಾಗುತ್ತಿದ್ದು, 'ಸಂಯಮ ಕಾಯ್ದುಕೊಳ್ಳಿ' ಎಂದು ಭದ್ರತಾ ಸಿಬ್ಬಂದಿಗೆ ದೆಹಲಿ ಪೊಲೀಸ್‌ನ ಜಂಟಿ ಆಯುಕ್ತ (ಕೇಂದ್ರ ವಲಯ) ಮಧುರ್ ವರ್ಮಾ ಕಿವಿಮಾತು ಹೇಳಿದ್ದಾರೆ.  


ಜನಸಂದಣಿಯನ್ನು ಶಿಸ್ತು, ಘನತೆ ಹಾಗೂ ಕನಿಷ್ಠ ಬಲ ಪ್ರಯೋಗದಿಂದ ನಿಯಂತ್ರಿಸುದರಲ್ಲಿ ಭದ್ರತಾ ಪಡೆಗಳ ಶಕ್ತಿ ಅಡಗಿದೆ ಎಂದು ಹೇಳಿದ್ದಾರೆ.

'ಚಂಡಮಾರುತಕ್ಕೆ ಸಜ್ಜಾಗಿ. ಸಂಯಮ ಕಾಯ್ದುಕೊಳ್ಳಿ. ಶಾಂತಿ ಕಾಪಾಡಿಕೊಳ್ಳಿ. ಯಾಕೆಂದರೆ, ಪೊಲೀಸರ ನಿಜವಾದ ಬಲ ಜನಸಂದಣಿಯನ್ನು ನಿಯಂತ್ರಿಸುವುದು ಮಾತ್ರವಲ್ಲ. ಅದನ್ನು ಶಿಸ್ತು, ಘನತೆ ಹಾಗೂ ಕನಿಷ್ಠ ಬಲಪ್ರಯೋಗದಿಂದಲ್ಲ' ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅ. 10ರಂದು ‍ಪ್ರತಿಭಟನೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ವರ್ಮಾ ಈ ಕರೆ ನಿಡಿದ್ದಾರೆ. ದೆಹಲಿ ಪೊಲೀಸರಿಗೆ ಸಹಾಯ ಮಾಡಲು ಅ.8ರಿಂದ 12ರವರೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸುಮಾರು 23 ಸಾವಿರ ಸಿಬ್ಬಂದಿಯನ್ನು ಕೇಂದ್ರ ಗೃಹ ಸಚಿವಾಲಯ ನಿಯೋಜಿಸಿದೆ.

ಈ ಹಿಂದಿನ ಪ್ರತಿಭಟನೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದರಿಂದ, ಅ.10ರಂದು ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಅನುಮತಿ ಕೋರಿ ಅ.7ರಂದು ಮನವಿ ಬಂದಿದೆ. ಆದರೆ ನಿಯಮಗಳನ್ವಯ ಕನಿಷ್ಠ 10 ದಿನ ಮುಂಚಿತವಾಗಿ ಅನುಮತಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿ ಸಿಬ್ಬಂದಿ ನಿಯೋಜನೆಯಿಂದ ದೆಹಲಿಯಲ್ಲಿ ಕೇಂದ್ರ ಸಶಸ್ತ್ರ ಪಡೆಯ ಒಟ್ಟು ಸಿಬ್ಬಂದಿ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಕಟ್ಟಳೆ ಕಾಪಾಡಿಕೊಳ್ಳಲು ಅ.9, 10ರಂದು ಮದ್ಯದಂಗಡಿಗಳನ್ನು ಮುಚ್ಚುವಂತೆ ದೆಹಲಿ ಸರ್ಕಾರ ಆದೇಶಿಸಿದೆ. ದೆಹಲಿ ಪೊಲೀಸರ ನಿರ್ದೇಶದಂತೆ ಕ್ರಮ ತೆಗೆದುಕೊಂಡಿರುವುದಾಗಿ ಅಬಕಾರಿ ಇಲಾಖೆ ಹೇಳಿದೆ. 


Prepare for the storm. Practise restraint. Protect the peace. Because the true strength of the police is not merely in controlling a crowd, but in doing so with discipline, dignity and minimum force. Show more










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries