ಪುದುಚೇರಿ: ತಟ್ಟಂಚವಾಡಿ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ನಡೆದ ಉಪಚುನಾವಣೆಯಲ್ಲಿ ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಆನಂದ್ ಜಯ ಸಾಧಿಸಿದ್ದಾರೆ.
ಆನಂದ್ ಅವರಿಗೆ 13,358 ಮತಗಳು ಬಂದಿದ್ದು, ಅವರ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಇ. ವಿನಾಯಕನ್ ಅವರಿಗೆ 4,876 ಮತಗಳು ದೊರೆತಿವೆ.
ಇದೇ ವರ್ಷ ಏಪ್ರಿಲ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಮಂಗಳಂ ಹಾಗೂ ತಟ್ಟಂಚವಾಡಿ ಕ್ಷೇತ್ರದಿಂದ ಕಣಕ್ಕಿಳಿದು, ಎರಡೂ ಕಡೆ ಜಯ ಸಾಧಿಸಿದ್ದರು. ನಂತರ ಅವರು, ತಟ್ಟಂಚವಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಉಪ ಚುನಾವಣೆ ನಡೆದಿತ್ತು.

ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆದಿರುವ ನಂದಿಗ್ರಾಮ ಹಾಗೂ ರೆಜಿನಗರ್ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಯ ಹುರಿಯಾಳುಗಳು ಭಾರಿ ಮುನ್ನಡೆಯೊಂದಿಗೆ ಜಯದತ್ತ ಹೆಚ್ಚಿ ಹಾಕಿದ್ದಾರೆ.
ತಮಿಳುನಾಡಿನಯೂ ಪರಿಸ್ಥಿತಿ ಹೀಗೆಯೇ ಇದೆ. ಅಲ್ಲಿನ ಮದುರಾಂತಕಮ್, ಧಾರಾಪುರಮ್ ಕ್ಷೇತ್ರಗಳಲ್ಲಿ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.



