HEALTH TIPS

ಸಿಹಿತಿಂಡಿ ಕೇಳಿದ ಮದುರೈ ಇನ್‌ಫ್ಲುಯೆನ್ಸರ್‌; ಮನೆ ಬಾಗಿಲಿಗೆ ಬಂದ ಟಿವಿ, ಫ್ರಿಡ್ಜ್‌!

ಮದುರೈ:  ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೊಗಳನ್ನು ಮಾಡುವ ಉದ್ದೇಶದಿಂದ ಸಿಹಿತಿಂಡಿಗಳನ್ನು ಕೇಳಿದ್ದ ಮದುರೈ ಮೂಲದ ಇನ್‌ಫ್ಲುಯೆನ್ಸರ್‌ ಒಬ್ಬರಿಗೆ, ಬಳಿಕ ಟಿವಿ ಮತ್ತು ಫ್ರಿಡ್ಜ್‌ಗಳಂತಹ ದುಬಾರಿ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ (COD) ಮೂಲಕ ಕಳುಹಿಸಲಾಗಿದ್ದು, ಪ್ರ್ಯಾಂಕ್‌ ನಿಲ್ಲಿಸುವಂತೆ ಆತ ಮನವಿ ಮಾಡಿರುವ ಘಟನೆ ವರದಿಯಾಗಿದೆ.


ವೀರಮಣಿ ಎಂಬವರೇ ಸಂಕಷ್ಟಕ್ಕೊಳಗಾದ ಇನ್ಫ್ಲುಯೆನ್ಸರ್. ಸಿಹಿತಿಂಡಿಗಳನ್ನು ಕೇಳುವ ನೆಪದಲ್ಲಿ ಆರಂಭವಾದ ಈ ತಮಾಷೆ, ಅನಿರೀಕ್ಷಿತವಾಗಿ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳ ಆರ್ಡರ್‌ಗಳಾಗಿ ಬದಲಾಗಿದೆ. ಟಿವಿ, ಫ್ರಿಡ್ಜ್‌ ಸೇರಿದಂತೆ ವಿವಿಧ ವಸ್ತುಗಳು ಮನೆಗೆ ತಲುಪಲಾರಂಭಿಸಿದಾಗ ಇನ್‌ಫ್ಲುಯೆನ್ಸರ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ವಿಡಿಯೋ ಮಾಡಿ ತಮ್ಮ ವೈಯಕ್ತಿಕ ವಿವರ, ವಿಳಾಸ ಹಂಚಿಕೊಂಡಿದ್ದ ವೀರಮಣಿ ಅವರು ಸಿಹಿತಿಂಡಿ ಕಳುಹಿಸುವಂತೆ ವಿಡಿಯೋ ಮಾಡಿದ್ದರು. ಇದರಿಂದ, ಅವರ ವಿಳಾಸ ಸಾರ್ವಜನಿಕಗೊಂಡಿತ್ತು.

ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆಯಲ್ಲಿ ವಸ್ತುಗಳನ್ನು ಸ್ವೀಕರಿಸುವಾಗ ಹಣ ಪಾವತಿಸಬೇಕಾಗುತ್ತದೆ. ಹೀಗಾಗಿ ತನಗೆ ಬೇಕಿಲ್ಲದ ವಸ್ತುಗಳನ್ನು ಸ್ವೀಕರಿಸುವ ಒತ್ತಡ ಎದುರಾಗಿದ್ದು, ಈ ತಮಾಷೆಯನ್ನು ಇಲ್ಲಿಗೇ ನಿಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ. ಸದ್ಯ ಅವರ ವಿಡಿಯೋಗಳು ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದ್ದು, ಹಲವರು ತಾವು ಇವರ ಪ್ರ್ಯಾಂಕ್ ಅನುಭವಗಳನ್ನು ಆನಂದಿಸುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಅವರ ವಿಡಿಯೋಗಳನ್ನು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಇನ್ಸ್ಟಾಮಾರ್ಟ್, ಬ್ಲಿಂಕ್ ಇಟ್, ಅಮೆಝಾನ್ ಮೊದಲಾದ ಆನ್ಲೈನ್ ವೆಬ್ ಸೈಟ್ ನಲ್ಲಿ ತರಹೇವಾರಿ ಸಾಮಗ್ರಿಗಳನ್ನು ವೀರಮಣಿ ಮನೆ ವಿಳಾಸಕ್ಕೆ ಆರ್ಡರ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ತಪ್ಪು ತಪ್ಪು ಆರ್ಡರ್ ಮಾಡುವುದರಿಂದ ಡೆಲಿವರಿ ಮಾಡುವವರಿಗೆ ಅನಗತ್ಯ ತೊಂದರೆ ಆಗುತ್ತಿದೆ, ಹಾಗಾಗಿ, ಇನ್ನು ಮುಂದೆ ಇಂತಹ ತಮಾಷೆ ಮಾಡಬೇಡಿ ಎಂದು ವೀರಮಣಿ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries