HEALTH TIPS

ರೈಲಿನಲ್ಲಿ ಮೊಬೈಲ್, ನಗದು ಕಳವು-ಕಾಸರಗೋಡು ನಿವಾಸಿ ಬಂಧನ

ಕಾಸರಗೋಡು: ನೇತ್ರಾವತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಹಣ ಹಾಗೂ ಮೊಬೈಲ್ ಫೆÇೀನ್‍ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪನ್ನಿಪ್ಪಾರ ಮುಟ್ಟತ್ತೋಡಿ ನಿವಾಸಿ ಅಬ್ದುಲ್ಲ ಕೆ.ಕೆ. (63) ಎಂಬಾತನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

2026ರ ಆಗಸ್ಟ್ 28ರಂದು ರೈಲು ಸಂಖ್ಯೆ 16345 ನೇತ್ರಾವತಿ ಎಕ್ಸ್‍ಪ್ರೆಸ್‍ನಲ್ಲಿ ಗೋವಾದ ಕಾನ್‍ಕೊನಾದಿಂದ ಕೋಯಿಕ್ಕೋಡಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ 30,000 ರೂ. ನಗದು ಹಾಗೂ ಇವರ ಸ್ನೇಹಿತನ 10,000 ರೂ. ಮೌಲ್ಯದ ಮೊಬೈಲ್ ಫೆÇೀನ್‍ಗಳನ್ನು ಕಳವು ಮಾಡಿರುವ ಆರೋಪ ಅಬ್ದುಲ್ಲನ ಮೇಲಿದೆ.

ಪ್ರಕರಣದ ತನಿಖೆ ನಡೆಸಿದ ಕೋಯಿಕ್ಕೋಡು ರೈಲ್ವೆ ಪೆÇಲೀಸ್ ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್, ಕಾಸರಗೋಡು ರೈಲ್ವೆ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ರಾಜೀವನ್ ಕೆ., ಸಬ್ ಇನ್ಸ್‍ಪೆಕ್ಟರ್ ಸಿ.ಎಸ್. ಸನಿಲ್ ಕುಮಾರ್, ಎಎಸ್‍ಐ ಗಂಗಾಧರನ್, ಸಿವಿಲ್ ಪೆÇಲೀಸ್ ಅಧಿಕಾರಿ ಸುಶಾಂತ್ ಪಿ. ಹಾಗೂ ರೈಲ್ವೆ ಪೆÇ್ರಟೆಕ್ಷನ್ ಫೆÇೀರ್ಸ್ (ಆರ್‍ಪಿಎಫ್) ಸಿಸಿಡಿಎಸ್ ಸ್ಕ್ವಾಡ್‍ನ ಎಎಸ್‍ಐ ಕೆ.ಎಂ. ಶಿಜು, ಹೆಡ್ ಕಾನ್‍ಸ್ಟೇಬಲ್ ಶ್ರೀಕಾಂತ್ ವಿ., ಕಾನ್‍ಸ್ಟೇಬಲ್ ಅಬ್ದುಲ್ ಸತ್ತಾರ್ ಮತ್ತು ಕಾಸರಗೋಡು ರೈಲ್ವೆ ಪ್ರೊಟೆಕ್ಷನ್ ಫೆÇೀರ್ಸ್ ಪೆÇೀಸ್ಟ್‍ನ ಕಾನ್‍ಸ್ಟೇಬಲ್ ರಾಜೇಶ್ ವಿ.ಟಿ. ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯಿಂದ ಎಂಟು ಮೊಬೈಲ್ ಫೆÇೀನ್ ವಶಪಡಿಸಿಕೊಂಡಿದ್ದಾರೆ.    



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries