ಕಾಸರಗೋಡು: ಇಲಿವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾಸರಗೋಡು ಕೂಡ್ಲು ಮನ್ನಿಪ್ಪಾಡಿ ಸನಿಹದ ಕಾಂತಿಕೆರೆ ನಿವಾಸಿ ಶಶಿಧರ (39)ಬುಧವಾರ ಮೃತಪಟ್ಟಿದ್ದಾರೆ.
ಕೆಲವು ದಿವಸಗಳ ಹಿಂದೆ ಇಲಿವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯಲಾಗಿತ್ತು. ಕುಞÂರಾಮ ಮಣಿಯಾಣಿ-ಶಂಕರಿ ದಂಪತಿ ಪುತ್ರನಾದ ಇವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದರು. ಅವಿವಾಹಿತರಾಗಿದ್ದರು.


