HEALTH TIPS

ಕೇಂದ್ರೀಯ ವಿ.ವಿಯಲ್ಲಿ ವಿದ್ಯಾರ್ಥಿ-ಪೋಲೀಸ್ ಘರ್ಷಣೆ: ಆರು ಎಸ್‍ಎಫ್‍ಐ ಕಾರ್ಯಕರ್ತರಿಗೆ ಗಾಯ

ಕಾಸರಗೋಡು: ವಂದೇ ಮಾತರಂನ 150ನೇ ವಾರ್ಷಿಕದಂಗವಾಗಿ ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರಗೋಷ್ಠಿ ವೇಳೆ ಎಬಿವಿಪಿ ಹೊರತುಪಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧವಾರವೂ ಪ್ರತಿಭಟನೆ ಮುಂದುವರಿಸಿತು. ಅತಿಥಿಗಳ ವಿರುದ್ಧ ತಮ್ಮ ಚಪ್ಪಲಿ ಹಾಗೂ ಬೂಟು ಎತ್ತಿ ತೋರಿಸುವ ಮೂಲಕ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಪ್ರತಿಭಟನೆ ವ್ಯಾಪಕ ವಿರೋಧಕ್ಕೂ ಕಾರಣವಾಯಿತು. 


ಪ್ರತಿಭಟನಾಕಾರರನ್ನು ತಡೆದ ಪೆÇಲೀಸರು ಮತ್ತು ವಿದ್ಯಾರ್ಥಿಗಳ ಮಧ್ಯೆ ಉಂಟಾದ ನೂಕುನುಗ್ಗಲಿನಲ್ಲಿ ಆರು ಮಂದಿ ಎಸ್‍ಎಫ್‍ಐ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಎಸ್‍ಎಫ್‍ಐ, ಎಐಎಸ್‍ಎಫ್, ಎನ್‍ಎಸ್‍ಯು, ಎಂಎಸ್‍ಎಫ್ ಹಾಗೂ ಫ್ರಟರ್ನಿಟಿಗೆ ಸೇರಿದ ವಿದ್ಯಾರ್ಥಿಗಳು ಮಂಗಳವಾರ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದ್ದರು. ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಆಗಮಿಸಿದ್ದ ಪ್ರಜ್ಞಾ ಪ್ರವಾಹ್ ರಾಷ್ಟ್ರೀಯ ಸಂಚಾಲಕ ನಂದಕುಮಾರ್ ಅವರನ್ನು ವಿದ್ಯಾರ್ಥಿ ಸಂಘಟನೆಗಳು ತಡೆಯಲು ಮುಂದಾಗಿದ್ದು ಇದು ವಿದ್ಯಾರ್ಥಿಗಳು ಮತ್ತು ಪೆÇಲೀಸರ ಮಧ್ಯೆ ಘರ್ಷಣೆಗೆ ದಾರಿಮಾಡಿಕೊಟ್ಟಿತು. ಇದಕ್ಕೆ ಸಂಬಂಧಿಸಿ ಮುಂಜಾಗ್ರತಾ ಕ್ರಮದಂತೆ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಅದ್ವಾಸ್ ಚಟ್ಟಂಚಾಲ್ (25), ಜತೆ ಕಾರ್ಯದರ್ಶಿ ಎಂ.ಅನುರಾಜ್ (26), ಜಿಲ್ಲಾ ಸಮಿತಿ ಸದಸ್ಯ ಹಾಗೂ ಹೊಸದುರ್ಗ ಬ್ಲಾಕ್ ಪಂಚಾಯತ್ ಸದಸ್ಯರಾಗಿರುವ ಪಿ.ಜೆ. ಮಂಜಿಷ (23), ಕಾರ್ಯಕರ್ತರಾದ ಕೆ.ವಿ. ರೋಷನ್ (27), ಕಾರ್ತಿಕ್ ರಾಜೀವ್ (23), ಟಿ. ಆದರ್ಶ್ (22), ಪಿ.ವಿ. ವಿಷ್ಣು (23), ಟಿ. ದಯಾ (20), ಕೆ.ಪಿ. ಸಜೀಶ್ (18), ಕೆ.ಪಿ.ಚಿರಾಗ್ (23) ಎಂಬಿವರನ್ನು ಬೇಕಲ ಠಾಣೆ ಪೆÇಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲದೆ ಹೊರಗಿನಿಂದ ಬಂದ ಎಸ್‍ಎಫ್‍ಐ ನೇತಾರರು ಶಾಮೀಲಾಗುವ ಮೂಲಕ ಸಮಾರಂಭ ಬುಡಮೇಲುಗೊಳಿಸಲು ಯತ್ನಿಸಿರುವುದಾಗಿಯೂ  ಆರೋಪ ಕೇಳಿಬಂದಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries