HEALTH TIPS

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಚಪ್ಪಲಿ, ಬೂಟು ಪ್ರದರ್ಶನ- ಸಂಸ್ಕøತಿ ಹೀನ, ರಾಜಕೀಯ ದಿವಾಳಿತನದ ಸಂಕೇತ: ವಕೀಲ ಕೆ. ಶ್ರೀಕಾಂತ್

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಂದೇ ಮಾತರಂ 150ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಲು ಆಗಮಿಸಿದ್ದ ಅತಿಥಿಗಳ ವಿರುದ್ಧ ಕೆಲವು ವಿದ್ಯಾರ್ಥಿಗಳು ಚಪ್ಪಲಿ ಮತ್ತು ಬೂಟು ಎತ್ತಿ ತೋರಿಸಿ ಘೋಷಣೆ ಕೂಗಿದ ವರ್ತನೆ ಸಂಸ್ಕೃತಿಹೀನ ಹಾಗೂ ರಾಜಕೀಯ ದಿವಾಳಿತನದ ಬಹಿರಂಗ ಪ್ರದರ್ಶನವಾಗಿದೆ ಎಂದು ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್ ತಿಳಿಸಿದ್ದಾರೆ. 




ತಮಗೆ ಇಷ್ಟವಿಲ್ಲದ ವಿಚಾರಧಾರೆಯವರು ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವುದನ್ನೂ ಸಹಿಸಿಕೊಳ್ಳಲಾಗದ ಅಸಹಿಷುಯೀ ಮೂಲಕ ಬಹಿರಂಗವಾಗಿದೆ. ವಿಚಾರಗಳನ್ನು ವಿಚಾರಗಳಿಂದ ಎದುರಿಸುವ ಸಾಮಥ್ರ್ಯವಿಲ್ಲದವರು ಚಪ್ಪಲಿ ಮತ್ತು ಬೂಟು ಎತ್ತಿ ತೋರಿಸುವ ಮೂಲಕ ತಮ್ಮ ಹೀನ ಪ್ರವೃತ್ತಿ ಮೆರೆದಿರುವುದಗಿ ಟೀಕಿಸಿದರು.

ಅಸಮ್ಮತಿ ವ್ಯಕ್ತಪಡಿಸುವ ಹಕ್ಕನ್ನು ಬಿಜೆಪಿ ಎಂದಿಗೂ ಪ್ರಶ್ನಿಸುವುದಿಲ್ಲ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಅತಿಥಿಗಳನ್ನು ಅವಮಾನಿಸುವುದು ಹಾಗೂ ಚಪ್ಪಲಿ ಮತ್ತು ಬೂಟುಗಳನ್ನು ಎತ್ತಿ ತೋರಿಸುವುದು ಪ್ರಜಾಸತ್ತಾತ್ಮಕ ಹಕ್ಕಿನ ನೆಪದಲ್ಲಿ ನಡೆಯುವ ರಾಜಕೀಯ ಅಪಕ್ವತೆ ಮತ್ತು ಸಂಸ್ಕೃತಿಹೀನತೆಯಾಗಿದೆ. ಆರೆಸ್ಸೆಸ್ ವಿಚಾರಧಾರೆಯ ಚಿಂತಕರು ಭಾಗವಹಿಸುವುದಕ್ಕೆ ವಿರೋಧವಿದ್ದರೆ ಅವರ ವಿಚಾರಗಳನ್ನು ಟೀಕಿಸುವುದು, ವೇದಿಕೆಯಲ್ಲಿ ವಾದಿಸುವುದು ಬಿಟ್ಟು,  ಚಪ್ಪಲಿ ಎತ್ತಿ ತೋರಿಸಬೇಕಾದ ಪರಿಸ್ಥಿತಿಯೇ ಆ ಪ್ರತಿಭಟನೆಯ ಬೌದ್ಧಿಕ ದಾರಿದ್ರ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯಗಳು ಜ್ಞಾನ ಮತ್ತು ವಿಚಾರ ವಿನಿಮಯದ ಕೇಂದ್ರಗಳಾಗಿವೆ. ತಮಗೆ ಇಷ್ಟವಿಲ್ಲದ ವಿಚಾರವನ್ನು ಕೇಳಲೂ ಸಾಧ್ಯವಾಗದ ಅಸಹಿಷ್ಣುತೆಯನ್ನು ಬೆಳೆಸುವುದು ವಿಶ್ವವಿದ್ಯಾಲಯದ ಸಂಸ್ಕೃತಿಗೆ ಮಾಡುವ ಅವಮಾನವಾಗಿದೆ ಎಂದು ಶ್ರೀಕಾಂತ್ ಟೀಕಿಸಿದರು.

ಚಪ್ಪಲಿ ಮತ್ತು ಬೂಟುಗಳನ್ನು ಎತ್ತಿ ತೋರಿಸುವ ಮೂಲಕ ಪ್ರತಿಭಟನೆಯ ಮಟ್ಟವನ್ನು ಕುಸಿಯುವಂತೆ ಮಾಡಲಾಗಿದೆ. ಇಂತಹ ಸಂಸ್ಕೃತಿಹೀನ ಪ್ರದರ್ಶನಗಳನ್ನು ವಿದ್ಯಾರ್ಥಿ ಸಮೂಹ ಹಾಗೂ ಸಾರ್ವಜನಿಕ ಸಮಾಜ ಬಲವಾಗಿ ತಿರಸ್ಕರಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries