ಬದಿಯಡ್ಕ: ರಜತ ವರ್ಷಾಚರಣೆಯ ಸಂಭ್ರಮದಲ್ಲಿರುವ ವೈಷ್ಣವಿ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಮೈಸೂರು ದಸರಾ ಉತ್ಸವದ ಅಂಗವಾಗಿ ಮೈಸೂರಿನ ರಮಾ ಗೋವಿಂದ ರಂಗಮಂದಿರದಲ್ಲಿ ನೃತ್ಯಾರ್ಪಣೆ ಕಾರ್ಯಕ್ರಮ ನಡೆಯಿತು.
ನಾಟ್ಯಾಲಯದ ವಿದ್ಯಾರ್ಥಿನಿಯರಾದ ವಿದುಷಿ ಹರ್ಷಿತಾ ಬದಿಯಡ್ಕ, ವಿದುಷಿ ಅಭಿಜ್ಞಾ ಕೊಳ್ತಿಗೆ, ಕು. ಭಾರ್ಗವಿ ಬಾಯಾರು, ಕು. ಪ್ರತೀಕಾ ರೈ ಕುಂಬ್ಡಾಜೆ, ಕು. ವೈಷ್ಣವಿ ಬದಿಯಡ್ಕ ಹಾಗೂ ಡಾ. ಅರ್ಪಿತಾ ಮುಳ್ಳೇರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪುಷ್ಪಾಂಜಲಿ ಹಾಗೂ ಗಣೇಶ ಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಶಿವಸ್ತುತಿ, ದೇವಿ ಸ್ತುತಿ, ತುಳುನಾಡಿನ ವರ್ಣನೆ ಒಳಗೊಂಡ ನೃತ್ಯಗಳು ಹಾಗೂ ತಿಲ್ಲಾನದೊಂದಿಗೆ ಸಂಪನ್ನಗೊಂಡಿತು.
ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

.jpg)
