ಮಂಜೇಶ್ವರ: ಮಂಜೇಶ್ವರ, ಮೀಂಜ ಹಾಗೂ ವರ್ಕಾಡಿ ಗ್ರಾಮ ಪಂಚಾಯತ್ಗಳ ಆರೋಗ್ಯ ಕಾರ್ಯಕರ್ತರಿಗಾಗಿ ಪ್ಯಾಲಿಯೇಟಿವ್ ಕೇರ್ ತರಬೇತಿ ಕಾರ್ಯಕ್ರಮ ಮಂಜೇಶ್ವರ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಗಳ್ ಕಾರ್ಯಕ್ರಮ ಉದ್ಘಾಟಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ರೈ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕುಚ್ಚಿಕಾಡ್ ಹಾಗೂ ಕಾಸರಗೋಡು ಎಚ್ಡಬ್ಲ್ಯುಸಿ ನೋಡಲ್ ಅಧಿಕಾರಿ ಡಾ. ಅಂಜು ಉಪಸ್ಥಿತರಿದ್ದರು.
ಆಸ್ಪತ್ರೆಯ ಫಿಸಿಯೋಥೆರಪಿಸ್ಟ್ ನಂದಕುಮಾರ್ ಸಿ.ಜಿ. ಸ್ವಾಗತಿಸಿದರು. ಸೆಕೆಂಡರಿ ಪ್ಯಾಲಿಯೇಟಿವ್ ಸಿಬ್ಬಂದಿ ನರ್ಸ್ ಸ್ಮಿತಾ ವಂದಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಪ್ಯಾಲಿಯೇಟಿವ್ ಕೇರ್ ಕುರಿತು ಕಾಸರಗೋಡು ಜಿಲ್ಲಾ ಪ್ಯಾಲಿಯೇಟಿವ್ ಕೇರ್ ಸಂಯೋಜಕ ಶಿಜಿ ಶೇಖರ್ ತರಬೇತಿ ನೀಡಿದರು.



