HEALTH TIPS

ಮಧ್ಯಂತರ ಚುನಾವಣೆ: ಮಿಚಿಗನ್‌ನಲ್ಲಿ ಒಬಾಮ ಸಮಾವೇಶದ ಬೆನ್ನಲ್ಲೇ ಟ್ರಂಪ್ ಪ್ರಚಾರ

ಲ್ಯಾನ್ಸಿಂಗ್‌ : ಮುಂದಿನ ವಾರ ನಡೆಯಲಿರುವ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ರಿಪಬ್ಲಿಕ್ ಪಕ್ಷದ ಅಭ್ಯರ್ಥಿಗಳ ಪರ ಪೂರ್ವ ಮಿಚಿಗನ್‌ನಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ರಾಜ್ಯದಲ್ಲಿ ಒಂದು ದಿನದ ಹಿಂದಷ್ಟೇ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳ ಪರ ಪ್ರಜಾರ ನಡೆಸಿದ್ದರು. 


ಯುಎಸ್‌ ಸೆನೆಟ್‌ಗೆ ನಡೆಯಲಿರುವ ಚುನಾವಣೆ ಪೈಕಿ ಮಿಚಿಗನ್‌ನಲ್ಲಿ ಅತ್ಯಂತ ನಿಕಟ ಪೈಪೋಟಿ ಇದೆ. ರಿಪಬ್ಲಿಕನ್ ಪಕ್ಷದ ಮಾಜಿ ಸಂಸದ ಮೈಕ್‌ ರೋಜರ್ಸ್‌ ಹಾಗೂ ಡೆಮಾಕ್ರಟಿಕ್ ಪಕ್ಷದ ಅಬ್ದುಲ್‌ ಎಲ್‌-ಸಯ್ಯದ್‌ ನಡುವೆ ಹಣಾಹಣಿ ಇದೆ. ಅಮೆರಿಕ ಸಂಸತ್‌ನ ಮೇಲ್ಮನೆಯಲ್ಲಿ (ಸೆನೆಟ್‌) ಯಾರಿಗೆ ಮೇಲುಗೈ ಸಿಗಲಿದೆ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ.

ಶ್ವೇತಭವನ ಹಾಗೂ ದೇಶದಾದ್ಯಂತ ನಡೆದ ಸಮಾವೇಶಗಳಲ್ಲಿ ಅಬ್ದುಲ್‌ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ್ದ ಟ್ರಂಪ್‌, ಈ ವರ್ಷ ಇದುವರೆಗೆ ಮಿಚಿಗನ್‌ನಲ್ಲಿ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ.

ಒಂದು ವೇಳೆ ಇಲ್ಲಿ ಅಬ್ದುಲ್‌ ಗೆದ್ದರೆ, ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎನಿಸಲಿದ್ದಾರೆ.

ಅಬ್ದುಲ್‌ ಅವರನ್ನು ಮುಸ್ಲಿಂ ಮೂಲಭೂತವಾದಿ ಎಂದು ಟ್ರಂಪ್‌ ಪದೇ ಪದೇ ಆರೋಪಿಸಿದ್ದಾರೆ. ರೋಜರ್ಸ್‌ ಕೂಡ, ಪ್ರಮುಖ ಇಸ್ಲಾಮಿಸ್ಟ್‌ ಸಂಘಟನೆ 'ಮುಸ್ಲಿಂ ಬ್ರದರ್‌ಹುಡ್' ಜೊತೆ ಡೆಮಾಕ್ರಟಿಕ್‌ ಅಭ್ಯರ್ಥಿಗೆ ಸಂಪರ್ಕವಿದೆ ಎಂದು ದೂರಿದ್ದಾರೆ.

ಆದರೆ, ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ಅಬ್ದುಲ್‌, ಅಮೆರಿಕದ ಮೇಲಿನ ತಮ್ಮ ನಿಷ್ಠೆ ಪ್ರಶ್ನಿಸುವುದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

ಶನಿವಾರ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಒಬಾಮ, ಅಬ್ದುಲ್‌ ವಿರುದ್ಧ ಟ್ರಂಪ್‌ ಹಾಗೂ ರೋಜರ್ಸ್‌ ಮಾಡುತ್ತಿರುವ ಆರೋಪಗಳ ಬಗ್ಗೆ ಮಾತನಾಡಿದ್ದರು.

'ಅಬ್ದುಲ್‌ಗೆ ತಮ್ಮಷ್ಟು ದೇಶಭಕ್ತಿ ಇಲ್ಲ ಎಂಬಂತೆ ಬಿಂಬಿಸಲು ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ವಿರುದ್ಧವೂ ಇಂತಹ ಟೀಕೆಗಳು ವ್ಯಕ್ತವಾಗಿದ್ದವು. ನಾನು ಕೀನ್ಯಾದಲ್ಲಿ ಹುಟ್ಟಿದವ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು. ಹಾಗಾಗಿ, ನಾವು ಈ ಸಿನಿಮಾವನ್ನು ಮೊದಲೇ ನೋಡಿದ್ದೇವೆ. ನನ್ನ ವಿಚಾರದಲ್ಲಿ ಆ ತಂತ್ರ ಯಶಸ್ವಿಯಾಗುವುದಿಲ್ಲ. ಅಬ್ದುಲ್‌ ವಿಚಾರದಲ್ಲಿಯೂ ಈ ಆಟ ನಡೆಯುವುದಿಲ್ಲ' ಎಂದು ಹೇಳಿದ್ದರು.

ಮಿಚಿಗನ್‌ನ ಪೋರ್ಟ್‌ ಹ್ಯುರಾನ್‌ನಲ್ಲಿ ಟ್ರಂಪ್‌ ಸಮಾವೇಶ ನಡೆಯಲಿದೆ. 2024ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಈ ಪ್ರದೇಶದಲ್ಲಿ ಶೇ 66ಕ್ಕಿಂತ ಹೆಚ್ಚು ಮತಗಳು ದೊರೆತಿದ್ದವು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries