ಕಾಸರಗೋಡು: ತ್ರಿಶೂರ್ ಜಿಲ್ಲೆಯ ಕೊಡಂಗಲ್ಲೂರು ಪೆÇಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿಯ ಮೃತದೇಹ ಕಾಸರಗೋಡಿನ ವಸತಿಗೃಹವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಡುಂಗಲ್ಲುರು ಅಳೇಕೋಡು ತಾಪು ನಿವಾಸಿ, ಟಿ. ಮಹಮ್ಮದ್ ನಜೀರ್ ಎಂಬವರ ಪುತ್ರ, ವೇಂಬಲೂರು ಶಾಲೆಯ ವಿದ್ಯಾರ್ಥಿ ಟಿ.ಎಂ. ಅಬ್ದುಲ್ ನಿಹಾಲ್ ಮೃತಪಟ್ಟ ವಿದ್ಯಾರ್ಥಿ. ಪ್ರಕಟಣಕ್ಕೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೆÇಲೀಸರು ಕೇಸು ದಾಖಲಿಸಿದ್ದಾರೆ.
ಕಾಸರಗೋಡು ನಗರದ ವಸತಿಗೃಹವೊಂದರಲ್ಲಿ ಅಬ್ದುಲ್ನಿಹಾಲ್ ಬುಧವಾರ ಕೊಠಡಿ ಬಾಡಿಗೆಗೆ ಪಡೆದಿದ್ದನು. ಗುರುವಾರ ರಾತ್ರಿ ವಸತಿಗೃಹದ ಸಿಬ್ಬಂದಿ ಕೊಠಡಿಯನ್ನು ಪರಿಶೀಲಿಸಿದಾಗ ಆತ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಠಡಿಯಲ್ಲಿ ದೊರೆತ ಗುರುತಿನ ಚೀಟಿಯ ಆಧಾರದಲ್ಲಿ ಮೃತನ ಗುರುತು ಪತ್ತೆಹಚ್ಚಲಾಗಿದೆ.
ಅಬ್ದುಲ್ನಿಹಾಲ್ ನಾಪತ್ತೆಯಾಗಿರುವ ಬಗ್ಗೆ ಕೊಡಂಗಲ್ಲೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬುಧವಾರ ಬೆಳಗ್ಗೆ ಕೊಡಂಗಲ್ಲೂರಿನ ಟ್ಯೂಷನ್ ಕೇಂದ್ರಕ್ಕೆ ತೆರಳಿದ್ದ ನಿಹಾಲ್, ಅಲ್ಲಿಗೆ ತಲುಪದೆ, ಮನೆಗೂ ವಾಪಸಾಗದ ಹಿನ್ನೆಲೆಯಲ್ಲಿ ಆತಂಕಗೊಂಡ ಪೆÇೀಷಕರು ಪೆÇಲೀಸರಿಗೆ ದೂರು ನೀಡಿದ್ದರು.


