ಕಾಸರಗೋಡು: ಬೈಕ್ನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿಕೊಂಡಿರುವ ಪಯ್ಯನ್ನೂರು ಠಾಣೆ ಪೊಲೀಸರು ಮುಳ್ಳೇರಿಯ ಪಳ್ಳಂಗೋಡು ನಿವಾಸಿಯನ್ನು ಬಂಧಿಸಿದ್ದಾರೆ. ಪಳ್ಳಂಗೋಡು ಮೀತಲೆ ವೀಟಲ್ ಎಂ.ಎ. ಮಹಮ್ಮದ್ ಶಬಾದ್ (30)ಬಂಧಿತ.
ಪಯ್ಯನ್ನೂರು ಠಾಣೆ ಎಸ್ಐ ಕೆ. ಸುಹೈಲ್ ಹಾಗೂ ತಂಡ ಶುಕ್ರವಾರ ನಸುಕಿನ 1.30ರ ವೇಳೆ ಕರಿವೆಳ್ಳೂರು ಪುದಿಯಂಗಾವ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನುಬಂಧಿಸಲಾಘಿದೆ. ಈತನ ವಶದಲ್ಲಿದ್ದ 4.55 ಗ್ರಾಂ ಎಂಡಿಎಂಎ ಹಾಗೂ ಸಾಗಿಸಲು ಉಪಯೋಗಿಸಿದ ಬೈಕನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪುದಿಯಂಗಾವ್ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಪಯ್ಯನ್ನೂರು ಭಾಗದಿಂದ ಆಗಮಿಸಿದ ಬೈಕ್ ಪರಿಶೀಲಿಸಿದಾಗ ಆರೋಪಿಯ ಒಳ ಉಡುಪಿನೊಳಗೆ ಪ್ಲಾಸ್ಟಿಕ್ ಕವರ್ನಲ್ಲಿರಿಸಿದ ಸ್ಥಿತಿಯಲ್ಲಿ ಮಾದಕ ಪದಾರ್ಥ ಪತ್ತೆಹಚ್ಚಲಾಗಿದೆ.

