HEALTH TIPS

ರೈಲುಗಳಲ್ಲಿ ಕಳವು-ಬಂಧಿತ ಆರೋಪಿ ವಿರುದ್ಧ ಮತ್ತೆ ಐದು ಕೇಸು ದಾಖಲು

ಕಾಸರಗೋಡು: ರೈಲುಗಳಲ್ಲಿ ನಿರಂತರ ಕಳವು ನಡೆಸುತ್ತಿರುವ ಮುಟ್ಟತ್ತೋಡಿ ಪನ್ನಿಪ್ಪಾರೆಯ ಕೆ.ಅಬ್ದುಲ್ಲ ಎಂಬಾತನ ವಿರುದ್ಧ ಮತ್ತೆ 5 ಕೇಸುಗಳನ್ನು ರೈಲ್ವೆ ಪೆÇಲೀಸರು ದಾಖಲಿಸಿಕೊಂಡಿದ್ದಾರೆ. ಈ ತಿಂಗಳ 7ರಂದು ನೇತ್ರಾವತಿ ಎಕ್ಸ್‍ಪ್ರೆಸ್ ರೈಲಿನಿಂದ ಎರಡು ಮೊಬೈಲ್ ಫೆÇೀನ್‍ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಅಬ್ದುಲ್ಲ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೆÇಲೀಸರು ಈತನನ್ನು ಕಸ್ಟಡಿಗೆ ತೆಗೆದು ವಿಚಾರಣೆಗೊಳಪಡಿಸಿದಾಗ ಈತ ಹಲವು ಮೊಬೈಲ್ ಫೆÇೀನ್‍ಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳವುನಡೆಸಿರುವ ಬಗ್ಗೆ ಮಾಹಿತಿ ಲಭಿಸಿದೆ.   ಈತ ವಾಸಿಸುವ ಕಾಞಂಗಾಡು ರೈಲು ನಿಲ್ದಾಣ ಸಮೀಪದ ಬಾಡಿಗೆ ಮನೆಯಿಂದ ಹಲವು ಫೆÇೀನ್‍ಗಳು  ಹಾಗೂ ಪಾಸ್‍ಪೆÇೀರ್ಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ರೈಲುಗಳಲ್ಲಿ ಕಳವು ನಡೆಸಿದ ಹಲವು ಬ್ಯಾಗ್‍ಗಳು, ಆಧಾರ್ ಕಾರ್ಡ್‍ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಹಲವು ರೈಲುಗಳಲ್ಲಿ ಪ್ರಯಾಣಿಕರ ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವುಗೈಯುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries