ಕಾಸರಗೋಡು: ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಚೇರಿ ವಠಾರದಲ್ಲಿ ನಿಲ್ಲಿಸಿದ್ದ ಕಾರಿನಿಂದ ಎಂಡಿಎಂಎ ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಣ್ಣೂರು ಜಿಲ್ಲೆಯ ಕಾಪ್ಪಾಡ್ ಕೆ. ಪಿ. ಫಾನಿಸ್ (35) ಪುತ್ತೂರು ತಾಲೂಕು ಆರ್ಲಪದವು ನಿವಾಸಿ ಮುಹ್ಮದ್ ಅನ್ಸಾದ್ (34) ಬಂಧಿತರು.
ಇವರ ವಶದಲ್ಲಿದ್ದ 0.240ಗ್ರಾಂ ಎಂಡಿಎಂಎ ಹಾಗೂ ಸಂಚಾರಕ್ಕೆ ಬಳಸಿದ್ದ ಕರ್ನಾಟಕ ನೋಂದಾಯಿತ ಕಾರು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯ ನೀಲೇಶ್ವರಂ ಠಾಣೆ ಪೆÇಲೀಸರು ಎಂಡಿಎಂಎ ಕೇಸಿನಲ್ಲಿ ವಶಪಡಿಸಿಕೊಂಡಿದ್ದ ಕಾರೊಂದನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಕಚೇರಿ ವಠಾರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಲ್ಲಿಸಿದ್ದ ಕಾರು ತಪಾಸಣೆ ನಡೆಸಿದಾಗ ಇದರಲ್ಲಿ ಎಂಡಿಎಂಎ ಪತ್ತೆಯಾಗಿತ್ತು. ಕಾಸರಗೋಡು ನಗರ ಠಾಣೆಯ ಅಧಿಕಾರಿ ಮೆಲ್ವಿನ್ ಜೋಸ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.


