ಬದಿಯಡ್ಕ: ಮಾನ್ಯ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿರುವ ತಿರುವಿಳಕ್ಕು ಮಹೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಸೇವಾ ಸಂಘದ ವತಿಯಿಂದ ಆಯೋಜಿಸಲಾದ ಸೇವಾ ನಿಧಿ ಲಕ್ಕಿ ಕೂಪನ್ನ ಬಂಪರ್ ಬಹುಮಾನವನ್ನು ವಿಜೇತ ವೆಂಕಪ್ಪ ನಾಯ್ಕ್ ಕೊಲ್ಲಂಗಾನ ಅವರಿಗೆ ವಿತರಿಸಲಾಯಿತು.
ಮಂದಿರದ ಪ್ರಧಾನ ಗುರುಸ್ವಾಮಿಗಳಾದ ಕುಂಕಿಕಣ್ಣ ಗುರುಸ್ವಾಮಿ, ಮಧುಸೂದನ, ಗಣೇಶ್ ಕೊಲ್ಲಂಗಾನ, ತಿರುವಿಳಕ್ಕು ಮಹೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ, ಹರಿಪ್ರಸಾದ್ ಸಿ.ಎಚ್. ಹಾಗೂ ಮಂದಿರದ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್ ಡಿ. ಮಾನ್ಯ ಉಪಸ್ಥಿತರಿದ್ದರು.
ಇದಲ್ಲದೆ, ಸೇವಾ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

.jpg)
