HEALTH TIPS

ಶಬರಿಗಿರಿ ಶ್ರೀ ಅಯ್ಯಪ್ಪ ಮಂದಿರದ ಆಮಂತ್ರಣ ಪತ್ರಿಕೆ ಬಿಡುಗಡೆ

 ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳಿಂದ ಬಿಡುಗಡೆ

ಬದಿಯಡ್ಕ: ಶಬರಿಗಿರಿ ನೂತನ ಶ್ರೀ ಅಯ್ಯಪ್ಪ ಮಂದಿರದ ಪ್ರತಿಷ್ಠಾ ಕಾರ್ಯ ಹಾಗೂ ಶ್ರೀ ಅಯ್ಯಪ್ಪ ತಿರುವಿಳಕ್ಕು ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಶ್ರೀಮಠದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಂತ್ರಾಕ್ಷತೆಯನ್ನಿತ್ತು ಆಶೀರ್ವಚನ ನೀಡಿದ ಸ್ವಾಮೀಜಿಗಳು, “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂಬ ಮಂತ್ರವು ಭಕ್ತರ ಬದುಕಿನಲ್ಲಿ ಶಾಂತಿ, ಶಿಸ್ತು ಹಾಗೂ ಭಕ್ತಿಭಾವವನ್ನು ಬೆಳೆಸಲು ಪ್ರೇರಣೆ ನೀಡುತ್ತದೆ. ಕಠಿಣ ವ್ರತಾಚರಣೆ, ಶರಣಾಗತಿ ಭಾವನೆ ಹಾಗೂ ಸರಳ ಜೀವನದ ಮೂಲಕ ಭಕ್ತರು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಾರೆ. ಅದೇ ರೀತಿ ಮಂದಿರದ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರತಿಷ್ಠಾಪನೆ ನೆರವೇರಿದ ಬಳಿಕ ಎಲ್ಲರೂ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಿರೀಶ್ ರೈ ವಳಮಲೆ, ನರೇಂದ್ರ ಬಿ.ಎನ್., ಉಮೇಶ್, ಡಾ. ಶ್ರೀನಿಧಿ ಸರಳಾಯ, ರಾಜೇಶ್ ಮಾಸ್ತರ್ ಚಂಬಲ್ತಿಮಾರು, ಕೃಷ್ಣ ಚುಳ್ಳಿಕ್ಕಾನ, ಪ್ರತೀಕ್ ಆಳ್ವ, ಮಹಿಳಾ ಸಮಿತಿಯ ಜಗದಂಬ ಹಾಗೂ ಪ್ರವೀಣ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries