ನವದೆಹಲಿ (ಪಿಟಿಐ): ಮುಸ್ಲಿಂ ವೈಯ ಕ್ತಿಕ ಕಾನೂನಿನ ಅಡಿಯಲ್ಲಿ ಬರುವ ಎಲ್ಲಾ ರೀತಿಯ ತಲಾಖ್ (ವಿಚ್ಛೇದನ) ಪ್ರಕ್ರಿಯೆಗಳನ್ನು ನಿಯಂತ್ರಿಸಲು, ಏಕರೂಪದ ಕಾರ್ಯ ವಿಧಾನದ ಸುರಕ್ಷತೆ ಮತ್ತು ಮಾರ್ಗಸೂಚಿ ರೂಪಿಸಿಜಾರಿಗೆ ತರಲು ನಿರ್ದೇಶನ ನೀಡ ಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಕೇಂದ್ರ ಸರ್ಕಾರ ಮತ್ತು ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆಯನ್ನು ಶುಕ್ರವಾರ ಕೋರಿದೆ.
ಅರ್ಜಿದಾರರ ಪರವಾಗಿ ಹಾಜರಿದ್ದ ವಕೀಲರು, 'ತಲಾಖ್-ಎ -ಹಸನ್'ನ ಸಿಂಧುತ್ವವನ್ನೂ ಪ್ರಶ್ನಿಸಿರುವುದಾಗಿಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರ ಪೀಠಕ್ಕೆ ತಿಳಿಸಿದರು.
ತಲಾಖ್-ಎ-ಹಸನ್ ಎಂಬುದು ಮುಸ್ಲಿಮರಲ್ಲಿ ಚಾಲ್ತಿಯಲ್ಲಿರುವ ಒಂದು ರೀತಿಯ ವಿಚ್ಛೇದನ ಪದ್ಧತಿಯಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬ ಮೂರು ತಿಂಗಳಅವಧಿಯಲ್ಲಿ ತಿಂಗಳಿಗೊಮ್ಮೆ ತಲಾಖ್ ಎಂಬ ಪದವನ್ನು ಉಚ್ಚರಿಸುವ ಮೂಲಕ ಮದುವೆಯನ್ನು ರದ್ದುಗೊಳಿಸ ಬಹುದಾಗಿದೆ. ನ್ಯಾಯಪೀಠವು ಈ ಅರ್ಜಿಯನ್ನು ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿದ ಮತ್ತೊಂದು ಬಾಕಿ ಇರುವ ಪ್ರತ್ಯೇಕ ಅರ್ಜಿಯೊಂದಿಗೆ ಸೇರಿಸಿದೆ. ಆ ಮಹಿಳೆ ತನ್ನ ಪತಿ ತನಗೆ ನೀಡಿದ ತಲಾಖ್-ಎ-ಹಸನ್ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.



